ಮನೆ ರಾಜ್ಯ ‘ಲಿಕ್ವಿಡ್ ನೈಟ್ರೋಜನ್’ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

‘ಲಿಕ್ವಿಡ್ ನೈಟ್ರೋಜನ್’ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

0

ಬೆಂಗಳೂರು: ರಾಜ್ಯದಲ್ಲಿ ‘ಲಿಕ್ವಿಡ್ ನೈಟ್ರೋಜನ್’ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಸ್ಮೋಕಿಂಗ್ ಬಿಸ್ಕತ್, ಡೆಸರ್ಟ್ಸ್ ಹಾಗು ಇತರೆ ತಿನಿಸುಗಳನ್ನು ಗ್ರಾಹಕರಿಗೆ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಸಲಾಗುತ್ತಿದೆ.

Join Our Whatsapp Group

ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಆಹಾರ ತಯಾರಕರಿಗೆ 7 ವರ್ಷ ಜೀವಾವಧಿ ಜೈಲು ಶಿಕ್ಷೆ ಹಾಗು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮದ ಪ್ರಕಾರ, ಲಿಕ್ವಿಡ್ ನೈಟ್ರೋಜನ್ ಅನ್ನು ಹೈನು ಉತ್ಪನ್ನ ಮತ್ತು ಐಸ್​ ಕ್ರೀಂ ತಯಾರಿಕೆಯ ಸಮಯದಲ್ಲಿ ಮಾತ್ರ ಬಳಸಲು ಅನುಮೋದನೆ ಇದೆ. ಆದರೆ ಸ್ಮೋಕಿಂಗ್ ಬಿಸ್ಕತ್, ಡೆಸರ್ಟ್ ತಿನಿಸುಗಳನ್ನು ಸೇವನೆಗಾಗಿ ನೀಡುವ ಸಂದರ್ಭದಲ್ಲಿ ಈ ಲಿಕ್ವಿಡ್ ಉಪಯೋಗಿಸುವುದಕ್ಕೆ ನಿರ್ಬಂಧವಿದೆ.

ಇತ್ತೀಚಿಗೆ, ಲಿಕ್ವಿಡ್​ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿತ್ತು. ಇದು ಜನರಲ್ಲಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು.

ಹಿಂದಿನ ಲೇಖನಮಾದಕ ವಸ್ತುಗಳ ತೂಕದಲ್ಲಿ ಬ್ಲಾಟರ್ ಪೇಪರ್‌ ಪರಿಗಣಿಸಬೇಕು: ಹೈಕೋರ್ಟ್
ಮುಂದಿನ ಲೇಖನಬಾಗಲಕೋಟೆ ಭ್ರೂಣಹತ್ಯೆ ಪ್ರಕರಣ: ಉಪ ವಿಭಾಗಾಧಿಕಾರಿ ಸಹಿತ ಐವರು ಹಿರಿಯ ಅಧಿಕಾರಿಗಳಿಗೆ ನೋಟಿಸ್‌ ಜಾರಿ