ಬೆಂಗಳೂರು: ರಾಜ್ಯದ ಅತ್ಯಂತ ಹಿಂದುಳಿದ ವರ್ಗಗಳ ಪ್ರವರ್ಗ 1 ರ ಪಿಂಜಾರ, ನದಾಫ್, ಚಪ್ಪರ ಬಂದ್, ಒಟಾರಿ ಸೇರಿದಂತೆ ಇತರ 13 ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 1ರ ಕಸಾಬ್, ಕಸಾಯ್, ಒಟಾರಿ, ನಾಲಬಂದ್, ತಕನರ, ಬಾಜಿಗಾರ್, ಚಪ್ಪರ್ ಬಂದ್ (ಮುಸ್ಲಿಂ), ದರ್ವೇಸು, ಜೋಹರಿ, ಫುಲ್ ಮಾಲಿ, ಪಿಂಜಾರಾ, ಪಿಂಜಾರಿ, ನದಾಫ್, ಲದಾಫ್ ಜಾತಿಗಳಿಗೆ ಈಗಾಗಲೇ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದೀಗ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.