ಮನೆ ರಾಜ್ಯ ಅನ್ನಭಾಗ್ಯದ ಅಕ್ಕಿ ಬದಲಾಗಿ “ಇಂದಿರಾ ಕಿಟ್” ನೀಡಲು ರಾಜ್ಯ ಸರ್ಕಾರದಿಂದ ಆದೇಶ

ಅನ್ನಭಾಗ್ಯದ ಅಕ್ಕಿ ಬದಲಾಗಿ “ಇಂದಿರಾ ಕಿಟ್” ನೀಡಲು ರಾಜ್ಯ ಸರ್ಕಾರದಿಂದ ಆದೇಶ

0

ಬೆಂಗಳೂರು : ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಕಿಟ್ ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪಡಿತರ ಕಾರ್ಡ್‌ನಲ್ಲಿ ಒಬ್ಬ ವ್ಯಕ್ತಿಗೆ ಇಂದಿರಾ ಕಿಟ್‌ನಲ್ಲಿ 1 ಕೆ.ಜಿ ತೊಗರಿ, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಉಪ್ಪು, 1 ಕೆ.ಜಿ ಹೆಸರುಕಾಳು ಇರಲಿದೆ. ಇದಕ್ಕೆ 422 ರೂ. ವೆಚ್ಚವಾಗಲಿದ್ದು, ಇದನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಪ್ರತ್ಯೇಕವಾಗಿ 5 ಕೆ.ಜಿ ಅಕ್ಕಿ ಸಿಗಲಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, 5 ಪಡಿತರ ಪದಾರ್ಥಗಳನ್ನ ನೀಡಲು ನಿರ್ಣಯವನ್ನ ಕೈಗೊಳ್ಳಲಾಗಿದೆ.