ಮನೆ ರಾಜ್ಯ ನಂದಿನಿ ಹಾಲಿನ ದರ ಲೀಟರ್ ಗೆ 5 ರೂ. ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ

ನಂದಿನಿ ಹಾಲಿನ ದರ ಲೀಟರ್ ಗೆ 5 ರೂ. ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ

0

ಬೆಂಗಳೂರು: ಮಾರ್ಚ್ ನಿಂದ ಚಹಾ, ಕಾಫಿ, ಮೊಸರು ಮತ್ತು ಇತರ ಹಾಲಿನ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಇದಕ್ಕೆ ಕಾರಣ ಸದ್ಯದಲ್ಲೇ ಪ್ರತಿ ಲೀಟರ್ ಹಾಲಿನ ಬೆಲೆಯ ಹೆಚ್ಚಳಕ್ಕೆ ಸರಕಾರ ಮುಂದಾಗಿರುವುದು.

Join Our Whatsapp Group

ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆಯಾದ ಕೂಡಲೇ ನಂದಿನಿ ಹಾಲಿನ ಬೆಲೆ ಲೀಟರ್ಗೆ 5 ರೂ. ಹೆಚ್ಚಳವಾಗಲಿದೆ. ಜತೆಗೆ  ಹಾಲಿನ ಪ್ರಮಾಣವನ್ನು ಈಗಿರುವ 1,050 ಎಂಎಲ್ ನಿಂದ 1 ಲೀಟರ್ ಗೆ ಇಳಿಸಲಾಗುವುದು. ಇದರೊಂದಿಗೆ ನಂದಿನಿ ಟೋನ್ಡ್ ಹಾಲಿನ ಬೆಲೆ ಲೀಟರ್ಗೆ 47 ರೂ.ಗೆ ಏರಿಕೆಯಾಗಲಿದೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ದರ ಹೆಚ್ಚಳದ ದೊಡ್ಡ ಮೊತ್ತ ಇದಾಗಲಿದೆ. ಈ ಹಿಂದೆ 2022 ರಲ್ಲಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 3 ರೂ.ಗೆ ಹೆಚ್ಚಿಸಲಾಗಿತ್ತು. 2024ರಲ್ಲಿ ಕೆಎಂಎಫ್ ಹಾಲಿನ ದರವನ್ನು ಪ್ರತಿ ಪ್ಯಾಕೆಟ್ಗೆ 2 ರೂಪಾಯಿ ಹೆಚ್ಚಿಸಿತ್ತು. ಆದಾಗ್ಯೂ, 2024 ರಲ್ಲಿ ಹಾಲಿನ ಬೆಲೆ ಏರಿಕೆಯು ಹೆಚ್ಚಳವಲ್ಲ ಎಂದು ಕೆಎಂಎಫ್ ಸಮರ್ಥಿಸಿಕೊಂಡಿದೆ, ಏಕೆಂದರೆ ಸರಬರಾಜು ಮಾಡಿದ ಹಾಲಿನ ಪ್ರಮಾಣವೂ ಹೆಚ್ಚಾಗಿದೆ.

ಕಾಫಿ ಬ್ರೂವರ್ಸ್ ಅಸೋಸಿಯೇಷನ್ ಮಾರ್ಚ್ ವೇಳೆಗೆ ಕಾಫಿ ಪುಡಿಯ ಬೆಲೆಯನ್ನು ಪ್ರತಿ ಕೆ.ಜಿ.ಗೆ 200 ರೂ.ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿದ ನಂತರ ಹಾಲಿನ ಬೆಲೆ ಹೆಚ್ಚಳವು ನಾಗರಿಕರಿಗೆ ಮತ್ತೊಂದು ಹೊಡೆತವಾಗಲಿದೆ.

ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೋ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ನೀರಿನ ದರವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಮುಂಬರುವ ಹಣಕಾಸು ವರ್ಷದಲ್ಲಿ ವಿದ್ಯುತ್ ದರವನ್ನು 67 ಪೈಸೆ ಹೆಚ್ಚಿಸುವಂತೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಕರ್ನಾಟಕ ವಿದ್ಯುತ್ ಆಯೋಗಕ್ಕೆ ಮನವಿ ಮಾಡಿವೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಮಾತನಾಡಿ, ರೈತರು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂತಿಮ ನಿರ್ಧಾರ ಈಗ ಮುಖ್ಯಮಂತ್ರಿಗೆ ಬಿಟ್ಟಿದ್ದು. ಇದು ರಾಜ್ಯ ಬಜೆಟ್ ನಂತರ ಜಾರಿಗೆ ಬರಲಿದೆ.

ಈ ಮೊದಲು ನಾವು ದಿನಕ್ಕೆ 85-89 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದೆವು. ಇದು ದಿನಕ್ಕೆ ೯೯ ಲಕ್ಷ ಲೀಟರ್ ಮತ್ತು ಅದಕ್ಕಿಂತ ಹೆಚ್ಚಾಗಿದೆ. ಈಗ, ನಾವು ದಿನಕ್ಕೆ 79-81 ಲಕ್ಷ ಲೀಟರ್ ಪಡೆಯುತ್ತಿದ್ದೇವೆ, ಆದ್ದರಿಂದ ಗ್ರಾಹಕರಿಗೆ ಸರಬರಾಜು ಮಾಡುವ ಹೆಚ್ಚುವರಿ ಹಾಲು ನಿಲ್ಲುತ್ತದೆ” ಎಂದು ಶಿವಸ್ವಾಮಿ ಹೇಳಿದರು, ಕರ್ನಾಟಕದಲ್ಲಿ 47 ರೂ.ಗಳ ಹೆಚ್ಚಳದ ಹಾಲಿನ ಬೆಲೆ ಕರ್ನಾಟಕ ಮತ್ತು ಇತರ ರಾಜ್ಯಗಳ ಇತರ ಬ್ರಾಂಡ್ ಗಳಿಗಿಂತ ಕಡಿಮೆ ಇದೆ ಎಂದು ಉಲ್ಲೇಖಿಸುವ ಮೂಲಕ ದರ ಹೆಚ್ಚಳವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.