ಮನೆ ರಾಜ್ಯ ಸುಸ್ಥಿರ ನಗರಗಳ ನಿರ್ಮಾಣಕ್ಕೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗ, (Climate RISE Alliance) ಕ್ಲೈಮೇಟ್‌...

ಸುಸ್ಥಿರ ನಗರಗಳ ನಿರ್ಮಾಣಕ್ಕೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗ, (Climate RISE Alliance) ಕ್ಲೈಮೇಟ್‌ ರೈಸ್‌ ಅಲಯನ್ಸ್‌ ಒಡಂಬಡಿಕೆ

0

ಬೆಂಗಳೂರು: ರಾಜ್ಯದ ನಗರಗಳನ್ನ ಹವಾಮಾನ ವೈಪರಿತ್ಯಗಳಿಂದಾಗುವ ಚೇತರಿಕೆಗೆ ಸಜ್ಜುಗೊಳಿಸಿ ಸುಸ್ಥಿರ ನಗರಗಳಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ Climate RISE Alliance  ಅಲಯನ್ಸ್‌ ನ, ಜನ ಅರ್ಬನ್ ಸ್ಪೇಸ್ ಫೌಂಡೇಶನ್, WRI ಇಂಡಿಯಾ, ಜನಾಗ್ರಹ, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್ (SWMRT), ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್, ಮತ್ತು  ದಿ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ (CSTEP) ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಪ್ರೊ. M V ರಾಜೀವ್ ಗೌಡ ಹೇಳಿದರು.

ಇಂದು ವಿಕಾಸಸೌಧದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಸ್ಥಿರ ಮತ್ತು ಹವಾಮಾನ-ನಿರೋಧಕ ನಗರಗಳ ನಿರ್ಮಾಣದ ಮೇಲೆ ಕೇಂದ್ರೀಕರಿಸಿದ ಕಾರ್ಯಸೂಚಿಯನ್ನು ಅನಾವರಣಗೊಳಿಸಿದ್ದೇವೆ.

“ಕರ್ನಾಟಕದ ನಗರಗಳು ಹವಾಮಾನ ವೈಪರಿತ್ಯಗಳಿಂದ ಚೇತರಿಸಿಕೊಳ್ಳುವಂತೆ ಅಭಿವೃದ್ದಿಗೊಳಿಸಲು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಬದ್ಧವಾಗಿದೆ. Climate RISE Alliance ನೊಂದಿಗಿನ ನಮ್ಮ ಸಹಯೋಗ ಮತ್ತು ಅವರ ಜ್ಞಾನ, ಸಂಶೋಧನೆ, ವಿಶ್ಲೇಷಣೆ ಮತ್ತು ಆಳವಾದ ಅನುಭವ ನಮ್ಮ ನಗರ ಪರಿಸರವನ್ನು ರಕ್ಷಿಸುವ ಮತ್ತು ನಮ್ಮ ಸಮುದಾಯಗಳ ಯೋಗಕ್ಷೇಮವನ್ನು ಹೆಚ್ಚಿಸುವ ಪರಿವರ್ತನೆಗೆ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ನಾವುಗಳು ನಮ್ಮ ಸಹಯೋಗವನ್ನು ಆರು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ.

ಈ ಸಹಯೋಗದಿಂದ ನಾವು ನಗರಗಳಲ್ಲಿ ನೀರಿನ ಚೇತರಿಕೆಯ ಯೋಜನೆಗಳ ಮೂಲಕ ಸಮಗ್ರ ನೀರಿನ ನಿರ್ವಹಣೆಯನ್ನು ಅಭಿವೃದ್ದಿಪಡಿಸಲಿದ್ದೇವೆ. ಪಾದಚಾರಿಗಳಿಗೆ ಅನುಕೂಲ ಮಾಡಿಕೊಡುವ ಮತ್ತು ವಾಸಯೋಗ್ಯ ನೆರೆಹೊರೆಯನ್ನು ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುವುದು. ನಗರ ಉಷ್ಣತೆ ಹಾಗೂ ಪ್ರವಾಹದ ಚೇತರಿಕೆಗೆ ಅಗತ್ಯವಿರುವ ಯೋಜನೆಗಳನ್ನ ರೂಪಿಸುವುದು. ಸಂಪನ್ಮೂಲದ ದಕ್ಷತೆಯನ್ನು ಹೆಚ್ಚಿಸುವುದು ಹಾಗೂ ಕಡಿಮೆ ಇಂಗಾಲವನ್ನು ಹೊರಸೂಸುವ ನಗರಗಳ ಅಭಿವೃದ್ದಿಗೊಳಿಸುವುದು. ಯುವ, ನಾವಿನ್ಯತೆಯ ಮತ್ತು ಸುಸ್ಥಿರ ಪಾಲ್ಗೊಳ್ಳುವಿಕೆಯ ಯೋಜನೆಗಳನ್ನು ರೂಪಿಸುವುದು ಸೇರಿದಂತೆ ಆಡಳಿತ, ಸಾಂಸ್ಥಿಕ ಕಾರ್ಯವಿಧಾನಗಳನ್ನು ಸಕ್ರೀಯಗೊಳಿಸುವ ಮೂಲಕ ಹವಾಮಾನ ಬದಲಾವಣೆಯ ಅಪಾಯಗಳು ಮತ್ತು ದುರ್ಬಲತೆಗಳನ್ನು ಕಡಿಮೆ ಮಾಡುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಅಲ್ಲದೇ, ಹವಾಮಾನ ವೈಪರಿತ್ಯಗಳಿಂದ ಚೇತರಿಕೆಗೆ ಸಜ್ಜುಗೊಳಿಸಿ ಸುಸ್ಥಿರ ನಗರಗಳ ನಿರ್ಮಾಣಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸೆಲ್‌ ನ್ನ ಪ್ರಾರಂಭಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜನ ಅರ್ಬನ್ ಸ್ಪೇಸ್ ಫೌಂಡೇಶನ್, WRI ಇಂಡಿಯಾ, ಜನಾಗ್ರಹ, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್ (SWMRT), ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್, ಮತ್ತು  ದಿ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ (CSTEP)ಯ ಪ್ರತಿನಿಧಿಗಳು ಉಪಸ್ಥಿತರಿದ್ದರು.