ಮನೆ ರಾಜ್ಯ ಬೆಂಗಳೂರಿನ ಶಾಂತಲಾ ಸಿಗ್ನಲ್ ​ನಲ್ಲಿ ಕೆಎಸ್​ ಆರ್​ ಟಿಸಿ ಬಸ್​ ಗಳ​ ಮೇಲೆ ಕಲ್ಲು ತೂರಾಟ

ಬೆಂಗಳೂರಿನ ಶಾಂತಲಾ ಸಿಗ್ನಲ್ ​ನಲ್ಲಿ ಕೆಎಸ್​ ಆರ್​ ಟಿಸಿ ಬಸ್​ ಗಳ​ ಮೇಲೆ ಕಲ್ಲು ತೂರಾಟ

0

ಬೆಂಗಳೂರು: ನಗರದಲ್ಲಿ ಕೆಎಸ್​ ಆರ್​ ಟಿಸಿ ಬಸ್​ ಗಳ​ ಮೇಲೆ ಕಲ್ಲು ತೂರಾಟವಾಗಿದೆ. ಬೆಂಗಳೂರಿನ ಶಾಂತಲಾ ಸಿಗ್ನಲ್​ ನಲ್ಲಿ ನಿನ್ನೆ ಮಧ್ಯ ರಾತ್ರಿ 2 ಕೆಎಸ್ ​ಆರ್​ ಟಿಸಿ ಬಸ್ ​ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಎರಡು ಕೆಎಸ್​ ಆರ್​ ಟಿಸಿ ಬಸ್ ​ಗಳ ಗ್ಲಾಸ್ ​ಗಳು ಪುಡಿ ಪುಡಿಯಾಗಿವೆ. ಇಮ್ರಾನ್ ಮತ್ತು ಆರೀಫ್ ಎಂಬ ಇಬ್ಬರು ಕಿಡಿಗೇಡಿಗಳು ದೊಣ್ಣೆಯಿಂದ ಗ್ಲಾಸ್ ಹೊಡೆದಿದ್ದಾರೆ ಎನ್ನಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ 2 ಕೆಎಸ್​ ಆರ್​ ಟಿಸಿ ಬಸ್​ ಗಳು ಶಾಂತಲಾ ಸಿಗ್ನಲ್​ ಬಳಿ ನಿಂತಿವೆ. ಹಿಂದೆಯೇ 1 ಆಟೋ, ಎರಡು ಬೈಕ್ ​ಗಳಲ್ಲಿ ಬಂದಿದ್ದ ಐವರು ಪುಂಡರು ಏಕಾಏಕಿ ರಾಡ್​, ದೊಣ್ಣೆ, ಕಲ್ಲುಗಳಿಂದ ಕೆಎಸ್​ ಆರ್ ​ಟಿಸಿ ಬಸ್ ​ನ ಗಾಜು ಹೊಡೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಮಧ್ಯರಾತ್ರಿ 1.45ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನೆ ನಡೆಯಲು ಕಾರಣ ಏನು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಸದ್ಯ ಕಾಟನ್ ಪೇಟೆ ಪೊಲೀಸರು ಇಮ್ರಾನ್ ಮತ್ತು ಆರೀಫ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಫೆ.16 ಅಥವಾ 17ರಂದು  ರಾಜ್ಯ ಬಜೆಟ್:  ಸಿದ್ದತೆ ಪ್ರಾರಂಭಿಸಿದ ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಹಾವೇರಿ: ಸಾಮೂಹಿಕ ಅತ್ಯಾಚಾರ ಪ್ರಕರಣದ 8ನೇ ಆರೋಪಿ ಬಂಧನ- ಪಿಎಸ್​ ಐ, ಕಾನ್ ​ಸ್ಟೆಬಲ್​ ಅಮಾನತು