ಮನೆ ಸುದ್ದಿ ಜಾಲ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಚಿಕ್ಕ ಹುಡುಗರಿಂದ ಕಲ್ಲೆಸೆತ – ಜಿ.ಪರಮೇಶ್ವರ್‌

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಚಿಕ್ಕ ಹುಡುಗರಿಂದ ಕಲ್ಲೆಸೆತ – ಜಿ.ಪರಮೇಶ್ವರ್‌

0

ಬೆಂಗಳೂರು : ಓಂ ಶಕ್ತಿ ಮಾಲಾಧಾರಿಗಳ ಮೇಲೆ ನಾಲ್ಕೈದು ಜನ ಚಿಕ್ಕ ಹುಡುಗರು ಕಲ್ಲೆಸಿದಿದ್ದಾರೆ. ಅವರನ್ನೆಲ್ಲ ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಜೆಜೆಆರ್ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಮಾಲಾಧಾರಿಗಳ ಮೇಲೆ ನಡೆದ ಕಲ್ಲು ತೂರಾಟದ ಬಗ್ಗೆ ಮಾಹಿತಿ ನೀಡಿದರು. ನಾಲ್ಕೈದು ಜನ ಚಿಕ್ಕ ಹುಡುಗರು 15-17 ವರ್ಷದವರು ಕಲ್ಲೆಸೆದಿದ್ದಾರೆ. ಎಲ್ಲರನ್ನೂ ಈಗಾಗಲೇ ಬಂಧಿಸಲಾಗಿದೆ. ಇದು ಬಾಲಾಪರಾಧದ ವ್ಯಾಪ್ತಿಗೆ ಬರುತ್ತದೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.

ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಭಾನುವಾರ (ಜ.4) ದೇವಿಯ ತೇರು ಎಳೆಯುತ್ತಿರುವ ವೇಳೆ ತೇರಿನ ಮೇಲೆ ಹಾಗೂ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದರು.

ಮೂವರಿಗೆ ಕಲ್ಲು ಬಿದ್ದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಕಲ್ಲು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದರು. ಮಗು, ಯುವತಿ, ವಯಸ್ಕ ಮಹಿಳೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಕಿಡಿಗೇಡಿಗಳನ್ನು ಬಂಧಿಸುವಂತೆ ಬಿಗಿಪಟ್ಟು ಹಿಡಿಯಲಾಗಿತ್ತು.

ತೇರಿನ ಮೇಲೆ ಅನ್ಯ ಕೋಮಿನವರಿಂದ ಕಲ್ಲು ಎಸೆದ ಆರೋಪ ಹೊರಿಸಲಾಗಿದೆ. ಓಂ ಶಕ್ತಿ ಮಾಲೆ ಧರಿಸಿದ್ದ ಮಗುವಿಗೂ ಕಲ್ಲೇಟು ಬಿದ್ದಿದೆ. ಘಟನೆ ಬಳಿಕ ಓಂ ಶಕ್ತಿ ಮಾಲಾಧಾರಿಗಳು ಜೆಜೆಆರ್ ನಗರ ಠಾಣೆಯ ಮುಂದೆ ಜಮಾಯಿಸಿ ಕ್ರಮಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.