ಮನೆ ರಾಜಕೀಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಿ: ಮೈತ್ರಿ ನಾಯಕರ ವಿರುದ್ದ ಡಿಸಿಎಂ ಡಿಕೆಶಿ

ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಿ: ಮೈತ್ರಿ ನಾಯಕರ ವಿರುದ್ದ ಡಿಸಿಎಂ ಡಿಕೆಶಿ

0

ಬೆಂಗಳೂರು: ಅನರ್ಹರ ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಬಡವರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

Join Our Whatsapp Group

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಪಿಎಲ್ ಕಾರ್ಡ್ ಕುರಿತು ಸರ್ವೇ  ಆಗುತ್ತಿದೆ. ಅನರ್ಹರ ಬಿಪಿಎಲ್ ಕಾರ್ಡನ್ನ ಮಾತ್ರ ತೆಗೆಯಲಾಗುತ್ತಿದೆ. ಇದರಿಂದ ಯಾವ ಬಡವರಿಗೂ ತೊಂದರೆ ಆಗಲ್ಲ, ಆದರೆ ಬಿಜೆಪಿ ಜೆಡಿಎಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ನಿಲ್ಲಿಸಬೇಕು ಎಂದು ಕಿಡಿಕಾರಿದರು.

ಬಿಜೆಪಿಗೆ ಹಾಗೂ ಕುಮಾರಸ್ವಾಮಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಏನು ಇಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿ ಆಗಿದೆ. ಯಾವ ಬಡವರಿಗೂ ಅವರು ಸಹಾಯ ಮಾಡಿಲಿಲ್ಲ, ಒಂದು ಕಾರ್ಯಕ್ರಮ ಕೋಡೋದಕ್ಕೆ ಆಗಲಿಲ್ಲ, ಅಕ್ಕಿ ಕಾರ್ಯಕ್ರಮ ಅವರು ಮಾಡಿದ್ರಾ?. ಪೆನ್ಷನ್ ಕೋಡೊ ಕಾರ್ಯಕ್ರಮ ಅವರು ಮಾಡಿದ್ರಾ? ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಪಿಎಲ್ ಕಾರ್ಡ್ ಕುರಿತು ಸರ್ವೇ ಆಗ್ತಾ ಇದೆ. ಕೆಲವು ಸರ್ಕಾರಿ ನೌಕರರು ಅನುಕೂಲಸ್ಥರರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗುತ್ತಿದೆ. ಅವುಗಳನ್ನು ಸರ್ವೇ ಮಾಡುತ್ತಿದ್ದೇವೆ, ನಮ್ಮ ರಾಜ್ಯದಲ್ಲಿ. ಬಡವರು ಯಾರು ಅನ್ನೋದರ ಲಿಮಿಟೇಷನ್ ರಾಜ್ಯ ಸರ್ಕಾರವೇ ಮಾಡಿದೆ. ಕೆಲವರು ಜಿಎಸ್‌ಟಿ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಅದರಲ್ಲಿ ಬಡವರು ಇದ್ದಾರೆ ಅಂದ್ರೆ ಮತ್ತೆ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಈ ಬಗ್ಗೆ ನಿನ್ನೆಯೇ ಸಿಎಂ ಅವರು ಸೂಚನೆ ಕೊಟ್ಟಿದ್ದಾರೆ. ಯಾವ ಬಡವರಿಗೂ ತೊಂದರೆ ಆಗಲ್ಲ ಎಂದರು.