ಮೈಸೂರು(Mysuru): ಬಿರುಗಾಳಿ ಸಹಿತ ಮಳೆಗೆ ಮನೆ ಗೋಡೆ ಕುಸಿದಿದ್ದು, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾದ ಘಟನೆ ನಂಜನಗೂಡು ನಗರದ ಶ್ರೀರಾಮಪುರ ಬಡಾವಣೆಯಲ್ಲಿ ನಡೆದಿದೆ.
ಶ್ರೀ ರಾಮಪುರ ಬಡಾವಣೆಯ ಮಹದೇವಮ್ಮ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದು ಬಿದ್ದಿದೆ.

ಈ ಕುರಿತು ಮನೆ ನಿವಾಸಿ ಮಹದೇವಮ್ಮ ಮಾತನಾಡಿ, ಮನೆ ಗೋಡೆ ಹೊರಗಡೆಗೆ ಕುಸಿದು ಬಿದ್ದಿದ್ದು, ಒಳಗಡೆಗೆ ಬಿದ್ದಿದ್ದರೆ ನಾವು ಬದುಕುಳಿಯುತ್ತಿರಲಿಲ್ಲ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ನಾವು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ವಾಸಿಸಲು ಮನೆ ಇಲ್ಲ ಮನೆ ನಿರ್ಮಾಣ ಮಾಡಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.














