ಮನಿಲ: ಫಿಲಿಪ್ಪೀನ್‌ನಲ್ಲಿ ಇಂದು ಮಂಗಳವಾರ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ.
ಇಂದು ದಕ್ಷಿಣ ಫಿಲಿಪ್ಪೀನ್‌ನ ಕೆಲವು ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ದಾವೊ ದ್ವೀಪದ ಪೂರ್ವಕ್ಕೆ ಸುಮಾರು 374 ಕಿ.ಮೀ ದೂರದಲ್ಲಿ ಆಳವಿಲ್ಲದ ಭೂಕಂಪ ಸಂಭವಿಸಿದೆ. ಸದ್ಯ ಯಾವುದೇ ಸಾವು ನೋವು ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಕಂಪದ ಬಗ್ಗೆ ಫಿಲಿಪ್ಪೀನ್ ವರದಿ ಮಾಡಿದ್ದರೂ ಯಾವುದೇ ಜ್ವಾಲಾಮುಖಿ ಅಥವಾ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಫಿಲಿಪೈನ್ಸ್ ಪೆಸಿಫಿಕ್ ರಿಂಗ್ ಆಫ್ ಫೈರ್ ವ್ಯಾಪ್ತಿಯಲ್ಲಿಯೇ ಬರುತ್ತದೆ. ಇಲ್ಲಿ ಭೂಕಂಪಗಳು ದೈನಂದಿನ ಘಟನೆಗಳಂತೆ ಸಾಮಾನ್ಯವಾಗಿದೆ.














