ಶಿವಮೊಗ್ಗ : ವಿದ್ಯಾರ್ಥಿಯೊಬ್ಬ ವಾಟ್ಸಪ್ ಪ್ರೊಫೈಲ್ ಡಿಪಿಗೆ ವೀರ ಸಾವರ್ಕರ್ ಫೋಟೋ ಹಾಕಿಕೊಂಡಿದ್ದಕ್ಕೆ ಆತನಿಗೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.
ಎಫ್ಐಆರ್ನಲ್ಲಿ, ಕಾಲೇಜಿನ ಕ್ಯಾಂಪಸ್ ಒಳಗಡೆ ಇದ್ದ ವಿದ್ಯಾರ್ಥಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ ಕರೆ ಮಾಡಿದ್ದಾನೆ. ಅಲ್ಲದೇ ಕರೆಯಲ್ಲಿ ಪ್ರೊಫೈಲ್ ಚಿತ್ರದಲ್ಲಿ ಇಟ್ಟುಕೊಂಡಿದ್ದ ವೀರ ಸಾವರ್ಕರ್ ಅವರ ಫೋಟೋವನ್ನು ತೆಗೆದುಹಾಕುವಂತೆ ಬೆದರಿಕೆ ಹಾಕಿದ್ದಾನೆ. ಜೊತೆಯಲ್ಲಿ ವಿದ್ಯಾರ್ಥಿಯ ವಿಳಾಸ ಕೇಳಿ ಹೆದರಿಸಿದ್ದಾನೆ
ಈ ಸಂಬಂಧ ವಿದ್ಯಾರ್ಥಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಾಲಯದಿಂದ ಅನುಮತಿ ಪಡೆದು ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಕಲಂ 352 ಮತ್ತು 351(2) ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಯು ತನ್ನ ಹೆಸರು ಬೇರೆ ಹೇಳಿದ್ದು, ಆತನ ನಂಬರ್ ಪರಿಶೀಲಿಸಿದಾಗ ಬೇರೆ ಹೆಸರು ಕಂಡು ಬಂದಿದೆ ಎಂದು ಎಫ್ಐಆರ್ನಲ್ಲಿ ತಿಳಿದುಬಂದಿದೆ.














