ಮನೆ ರಾಜ್ಯ ರಜಾ ದಿನಗಳಲ್ಲೂ ‘ಸಬ್ ರಿಜಿಸ್ಟ್ರಾರ್’ ಕಚೇರಿಗಳು ಕಾರ್ಯನಿರ್ವಹಣೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ರಜಾ ದಿನಗಳಲ್ಲೂ ‘ಸಬ್ ರಿಜಿಸ್ಟ್ರಾರ್’ ಕಚೇರಿಗಳು ಕಾರ್ಯನಿರ್ವಹಣೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

0

ಬೆಂಗಳೂರು: ಸಾರ್ವಜನಿಕರಿಗೆ ಸುಗಮ ಮತ್ತು ಜನಮಿತ್ರ ಆಡಳಿತ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಹೆಜ್ಜೆ ಹಾಕಿದ್ದು, ರಜಾ ದಿನಗಳಾದ ಶನಿವಾರ ಮತ್ತು ಭಾನುವಾರಗಳಲ್ಲಿಯೂ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಈ ಕುರಿತು ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.

ರಾಜ್ಯ ಸರಕಾರದ ಅಧಿಸೂಚನೆಯ ಪ್ರಕಾರ, ಪ್ರತಿಯೊಂದು ಜಿಲ್ಲಾನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ಉಪನೋಂದಣಿ ಕಚೇರಿಗಳು ಪ್ರತಿ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳಲ್ಲಿ ಸೇವೆ ನೀಡಲಿದ್ದು, ಮಂಗಳವಾರದ ದಿನ ಆ ಕಚೇರಿಗೆ ಪರ್ಯಾಯ ರಜಾ ದಿನವಾಗಿ ಘೋಷಿಸಲಾಗಿದೆ.

ಈ ಕ್ರಮದಿಂದಾಗಿ ಜಮೀನಿನ ದಾಖಲಾತಿ, ಆಸ್ತಿ ನೋಂದಣಿ ಮುಂತಾದ ಕೆಲಸಗಳನ್ನು ಮಾಡುವವರಿಗೆ ಹೆಚ್ಚುವರಿ ಅನುಕೂಲ ಸಿಗಲಿದೆ. ಬಹುತೇಕ ಜನಸಾಮಾನ್ಯರು ತಮ್ಮ ರಜಾ ದಿನಗಳಲ್ಲಿ, ವಿಶೇಷವಾಗಿ ವಾರಾಂತ್ಯಗಳಲ್ಲಿ ಈ ರೀತಿಯ ಪ್ರಕ್ರಿಯೆಗಳನ್ನು ಮುಗಿಸಲು ಬಯಸುತ್ತಾರೆ. ಈ ಕ್ರಮದಿಂದ ಸಾರ್ವಜನಿಕರು ಹಾಗು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಾಗಲಿದೆ.