ಕಲಬುರಗಿ: ಗದಗ ಜೆಎಂಎಫ್’ಸಿ ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಭಾಷಚಂದ್ರ ರಾಠೋಡ ಅವರು ಚಿತ್ತಾಪುರ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸುಭಾಷಚಂದ್ರ ರಾಠೋಡ ಈ ಕುರಿತು ಮಾತನಾಡಿ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜಾತ್ಯಾತೀತ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿದೆ. ಸಮಾಜಮುಖಿ, ಜನಪರ ಕೆಲಸ ಮಾಡಲು ಅವಕಾಶವಿದೆ. ಚಿತ್ತಾಪುರ ಮತಕ್ಷೇತ್ರದ ಪರಿಚಯವಿದೆ. ಜನರ ನಾಡಿಮಿಡಿತ, ಸಮಸ್ಯೆ ಅರಿತಿರುವೆ. ಹೀಗಾಗಿ ಚಿತ್ತಾಪುರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದೇನೆ ಎಂದು ತಿಳಿಸಿದರು.
ಅವರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಸಂಕದಾಳ ಗ್ರಾಮದವರಾಗಿದ್ದಾರೆ.