ಬೆಂಗಳೂರು : ಕಾಂಗ್ರೆಸ್ ಕೋಟೆಯಲ್ಲಿ ಉತ್ತರಾಧಿಕಾರಿ ಯುದ್ಧ ತಾರಕ್ಕಕೇರಿದೆ. ಅಕ್ಟೋಬರ್ ಮುಗಿದು ನವೆಂಬರ್ ಆರಂಭಕ್ಕೆ ದಿನ ಹತ್ತಿರವಾಗ್ತಿದ್ದಂತೆ ತೆರೆಮರೆಯ ಆಟಗಳು ಜೋರಾಗಿವೆ. ಸಿಎಂ ಸಿದ್ದರಾಮಯ್ಯ ನಂತರ ಜವಾಬ್ದಾರಿ ವಹಿಸಿಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿಗೆ ಸಾಮರ್ಥ್ಯವಿದೆ ಎಂದಿದ್ದ ಯತೀಂದ್ರ ಹೇಳಿಕೆ ಹೈಕಮಾಂಡ್ ಕಿವಿಗೂ ಮುಟ್ಟಿದೆ.
ಅಲ್ಲದೇ ಯತೀಂದ್ರಗೆ ನೋಟಿಸ್ ಕೊಡಲ್ವಾ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಾಯಕರು ಪ್ರಶ್ನಿಸಿದ್ದಾರೆ. ಡಿಕೆ ಶಿವಕುಮಾರ್ ಬಣದ ನಾಯಕರು ನೋಟಿಸ್ ಅಸ್ತ್ರ ಪ್ರಯೋಗಿಸ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಯತೀಂದ್ರ ಹೇಳಿದ್ದೇ ಸೈದ್ಧಾಂತಿಕವಾಗಿ ಅಂತಾ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಬಣದ ಆಕ್ರೋಶ ತಣಿಸಲು ಸಿಎಂ ಸಿದ್ದರಾಮಯ್ಯ ಸೈದ್ಧಾಂತಿಕ ಟಚ್ ಕೊಟ್ಟಿದ್ದಾರೆ. ಇತ್ತ ಯತೀಂದ್ರ ಕೂಡ ನನ್ನ ಹೇಳಿಕೆ ನಾನು ಬದ್ಧ ಎಂದಿದ್ದಾರೆ. ಏನ್ ಹೇಳ್ಬೇಕೋ ಹೇಳಿದೀನಿ. ನಾನು ಹೇಳಿದರಲ್ಲಿ ತಪ್ಪಿಲ್ಲ ಎಂದರು.
ನೋಟಿಸ್ ಬಂದಾಗ ನೋಡೋಣ ಎಂದಿರೋ ಯತೀಂದ್ರ, 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ ಅಂತಾ ಕಡ್ಡಿಮುರಿದಂತೆ ಹೇಳಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂತಿರೋ ನಾಯಕರಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.















