ಮನೆ ಕಾನೂನು ರಾಮನಗರ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ

ರಾಮನಗರ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ

0

ರಾಮನಗರ: ಲೋಕಾಯುಕ್ತ ಅಧಿಕಾರಿಗಳು ಗುರುವಾರ ಜಿಲ್ಲಾಸ್ಪತ್ರೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾಸ್ಪತ್ರೆ ಔಷಧಿ ಮಳಿಗೆ, ವೈದ್ಯರ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಅವಧಿ ಮುಗಿದ ಮಾತ್ರೆಗಳು, ಔಷಧಿ ನೀಡುತ್ತಿದ್ದಾರಾ? ವೈದ್ಯರು ಲಂಚ ಪಡೆಯುತ್ತಿದ್ದಾರಯೇ?, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿದ್ದರೆಯೇ? ಡಯಾಲಿಸಿಸ್, ರಕ್ತ ಪರೀಕ್ಷೆಗೆ ಖಾಸಗಿಯಾಗಿ ಚೀಟಿ ಬರೆದು ಕೊಡುತ್ತಿದ್ದರೆಯೇ ಎಂದು ಮಾಹಿತಿ ಕಲೆಹಾಕಿದ್ದಾರೆ.

ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಗಿದ್ದು, ಅವಧಿ ಮೀರಿದ ಔಷಧಿ–ಮಾತ್ರೆ ನೀಡದಂತೆ, ರೋಗಿಗಳು, ಹೆರಿಗೆ ಸೇರಿದಂತೆ ಯಾರ ಬಳಿ ಲಂಚ ಪಡೆಯದಂತೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹಿಂದಿನ ಲೇಖನಮದ್ಯ ನೀತಿ ಪ್ರಕರಣ: ಸಮನ್ಸ್ ಧಿಕ್ಕರಿಸಿ ಇಡಿ ಕಚೇರಿಗೆ ಭೇಟಿ ನೀಡದ ಅರವಿಂದ ಕೇಜ್ರಿವಾಲ್
ಮುಂದಿನ ಲೇಖನಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.7ರವರೆಗೆ ನ್ಯಾಯಬೆಲೆ ಅಂಗಡಿ ಬಂದ್