ಮನೆ ರಾಜ್ಯ ಬಿಗ್‌ ಬಾಸ್‌ ಶೂಟಿಂಗ್‌ನಲ್ಲಿ ಸುದೀಪ್‌ ಭಾಗಿ

ಬಿಗ್‌ ಬಾಸ್‌ ಶೂಟಿಂಗ್‌ನಲ್ಲಿ ಸುದೀಪ್‌ ಭಾಗಿ

0

ರಾಮನಗರ : ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ಶೂಟಿಂಗ್‌ ಆರಂಭವಾಗಿದ್ದು ನಟ ಕಿಚ್ಚ ಸುದೀಪ್‌ ಭಾಗಿಯಾಗಿದ್ದಾರೆ.

ಪ್ರತಿ ಶನಿವಾರ ಮತ್ತು ಭಾನುವಾರ ಸುದೀಪ್‌ ಅವರು ಸ್ಪರ್ಧಿಗಳ ಜೊತೆ ಮಾತನಾಡುತ್ತಾರೆ. ಈ ಕಾರ್ಯಕ್ರಮದ ಶೂಟಿಂಗ್‌ಗಾಗಿ ಸುದೀಪ್‌ ಇಂದು ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಸದ್ಯಕ್ಕೆ ಸಂಪೂರ್ಣವಾಗಿ ಜಾಲಿವುಡ್‌ ಸ್ಟುಡಿಯೋ ತೆರೆಯಲು ಅನುಮತಿ ನೀಡಿಲ್ಲ. ಆದರೆ ಬಿಗ್‌ ಬಾಸ್‌ ನಡೆಯುವ ಜಾಗ ತೆರೆಯಲು ಮಾತ್ರ ಅನುಮತಿ ನೀಡಿದೆ.

ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಜಾಲಿವುಡ್‌ ಸ್ಟುಡಿಯೋದ ಆಡಳಿತ ಮಂಡಳಿ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಮನವಿ ಮಾಡಿದೆ.

ಡಿಸಿಎಂ ಡಿಕೆ ಶಿವಕುಮಾರ್‌ ಮಧ್ಯಪ್ರವೇಶದಿಂದ ಮತ್ತೆ ಬಿಗ್‌ ಬಾಸ್‌ ಮನೆಯಲ್ಲಿ ಶೂಟಿಂಗ್‌ ಆರಂಭವಾಗಿದ್ದು, ಗುರುವಾರ ಮುಂಜಾನೆ ಬಿಡದಿ ರೆಸಾರ್ಟ್‌ನಲ್ಲಿದ್ದ, ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ.