ಮನೆ ರಾಜ್ಯ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಧಾ ಮೂರ್ತಿ

ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಧಾ ಮೂರ್ತಿ

0

ದೆಹಲಿ: ಇಂಜಿನಿಯರ್, ಸಮಾಜ ಸೇವಕಿ, ಲೇಖಕಿ ಸುಧಾ ಮೂರ್ತಿ ಅವರು ಇಂದು (ಗುರುವಾರ) ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸುಧಾ ಮೂರ್ತಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಸುಧಾ ಮೂರ್ತಿ ಪತಿ ಎನ್‌ ಆರ್ ನಾರಾಯಣ ಮೂರ್ತಿ ಕೂಡಾ ಉಪಸ್ಥಿತರಾಗಿದ್ದರು.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ಸಂಸತ್ ಭವನದ ತಮ್ಮ ಚೇಂಬರ್‌ನಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಭಾನಾಯಕ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು.

73ರ ಹರೆಯದ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ,ಲೇಖಕಿ ಕಳೆದ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.

ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ. ಇವರು ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಪದ್ಮಶ್ರೀ (2006) ಮತ್ತು ಪದ್ಮಭೂಷಣ (2023) ಪುರಸ್ಕೃತರಾಗಿದ್ದಾರೆ.

TELCO ನೊಂದಿಗೆ ಕೆಲಸ ಮಾಡಿದ ಮೊದಲ ಮಹಿಳಾ ಇಂಜಿನಿಯರ್ ಆಗಿರುವ ಸುಧಾ ಮೂರ್ತಿ ಅವರು ತಮ್ಮ ತುರ್ತು ನಿಧಿಯಿಂದ ₹ 10,000 ಬಂಡವಾಳವನ್ನು ತಮ್ಮ ಪತಿಗೆ ಇನ್ಫೋಸಿಸ್ ಅನ್ನು ಪ್ರಾರಂಭಿಸಲು ನೀಡಿದ್ದರು. ಅದೇ ಇನ್ಫೋಸಿಸ್ ಈಗ USD 80 ಶತಕೋಟಿಗೂ ಹೆಚ್ಚು ಮಾರುಕಟ್ಟೆಯನ್ನು ಹೊಂದಿದೆ. ಅವರ ಮಗಳು ಅಕ್ಷತಾ ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಕ್ ಅವರ ಪತ್ನಿ.

ಸುಧಾ ಮೂರ್ತಿ ಕಿರು ಪರಿಚಯ

ಸುಧಾ ಮೂರ್ತಿ ಅವರು ಆಗಸ್ಟ್ 19, 1950 ರಂದು ಭಾರತದ ಕರ್ನಾಟಕದ ಹಾವೇರಿಯ ಶಿಗ್ಗಾಂವ್‌ನಲ್ಲಿ ಜನಿಸಿದರು, ಅವರ ಪೋಷಕರು ಡಾ. ಆರ್. ಹೆಚ್. ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ. ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ಸುಧಾ ಅವರ ಪರಿಸರ ,ಶಿಕ್ಷಣ ಮತ್ತು ಶ್ರದ್ಧೆಯ ಮಹತ್ವವನ್ನು ಒತ್ತಿಹೇಳುವಂಥದ್ದಾಗಿತ್ತು.  ಸುಧಾ ಅವರ ಅಪ್ಪ ಸರ್ಜನ್, ತಾಯಿ ಬಾಲ್ಯದಿಂದಲೂ ಆಕೆಯ ಆಕಾಂಕ್ಷೆಗಳನ್ನು ಬೆಂಬಲಿಸಿದರು. ಸಾಮಾಜಿಕ ರೂಢಿಗಳ ಹೊರತಾಗಿಯೂ, ಸುಧಾ ತನ್ನ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಪ್ರೋತ್ಸಾಹ  ಸಿಕ್ಕಿತ್ತು., ಇದು ಆ ಯುಗದಲ್ಲಿ ಹುಡುಗಿಯರಿಗೆ ಅಸಾಮಾನ್ಯವಾದ ವೃತ್ತಿ ಮಾರ್ಗಗಳನ್ನು ಅನ್ವೇಷಿಸಲು ಅವಕಾಶ ಮಾಡಿಕೊಟ್ಟಿತು.