ಮನೆ ಅಪರಾಧ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳು

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳು

0

ಮಂಗಳೂರು: ದಕ್ಷಿಣ ಕನ್ನಡದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಬಹಿರಂಗ ಹೇಳಿಕೆಯಿಂದಾಗಿ ಪ್ರಕರಣವು ಹೊಸ ವಿಸ್ತಾರಕ್ಕೆ ಕಾರಣವಾಗಿದ್ದು, ಇಡೀ ಜಿಲ್ಲೆಯ ಶಾಂತಿ-ಸುವ್ಯವಸ್ಥೆ ಮತ್ತು ಧರ್ಮೀಯ ಸಹಬಾಳ್ವೆಗೆ ಸವಾಲು ಎಸೆದಂತಾಗಿದೆ.

ಪೊಲೀಸರು ಬಂಧಿಸಿದ 8 ಆರೋಪಿಗಳ ಪೈಕಿ, ರಂಜಿತ್ (19) ಮತ್ತು ನಾಗರಾಜ್ (20) ಎಂಬ ಇಬ್ಬರು ಹಿಂದೂ ಯುವಕರು ಇದ್ದಾರೆ ಎಂಬುದನ್ನು ಪೊಲೀಸ್ ಆಯುಕ್ತರು ಖಚಿತಪಡಿಸಿದ್ದಾರೆ. ಇವರು ಅಬ್ದುಲ್ ಸಫ್ವಾನ್ನ ಜೊತೆ ಕೊಲೆ ಸಂಚು ನಡೆಸುವಾಗ ಆತನ ಮನೆಯಲ್ಲಿ ಎರಡು ದಿನ ವಾಸವಿದ್ದರು ಎನ್ನಲಾಗಿದೆ.

2023 ರಲ್ಲಿ ಹತ್ಯೆಗೀಡಾದ ಫಾಜಿಲ್ ಅವರ ಸಹೋದರ ಆದಿಲ್ ಮೆಹರೂಫ್, ಸುಹಾಸ್ ಶೆಟ್ಟಿ ಅವರನ್ನು ಕೊಲ್ಲಲು ಅಬ್ದುಲ್ ಸಫ್ವಾನ್ನಿಗೆ ₹5 ಲಕ್ಷ ಫಂಡಿಂಗ್ ಮಾಡಿದ್ದಾರೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಇದರಿಂದಾಗಿ, ಈ ಕೊಲೆಕೃತ್ಯವು ವೈಯಕ್ತಿಕ ಪ್ರತೀಕಾರ, ಸಂಘಟಿತ ಅಪರಾಧ ಮತ್ತು ಧಾರ್ಮಿಕ ರಾಜಕಾರಣಗಳ ಮಿಶ್ರಣವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

2023 ರಲ್ಲಿ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದು, ಆ ಹಲ್ಲೆಗೆ ಸುಹಾಸ್ ಶೆಟ್ಟಿಯ ಕೈವಾಡವಿದೆ ಎಂಬ ಶಂಕೆಯಿಂದ, ಸಫ್ವಾನ್ ಅವನನ್ನು ಗುರಿಯಾಗಿಸಿದ್ದ. ಈ ಸಂಬಂಧ ಆದಿಲ್ ಮತ್ತು ಸಫ್ವಾನ್ ನಡುವೆ ಸಂಚು ರೂಪಿಸಿ, ಕೊನೆಗೆ ಕೊಲೆ ನಡೆಸಲಾಗಿದೆ.

ಪ್ರಮುಖ ಅಂಶಗಳು: ಸುಹಾಸ್ ಕೊಲೆ ಮಾಡಲು ಸಫ್ವಾನ್​ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದ. ಈ 5 ಲಕ್ಷ ರೂಪಾಯಿಗಾಗಿ ಆದಿಲ್ ಫಂಡಿಂಗ್ ಮಾಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.