ಪಾಕಿಸ್ತಾನ: ಕರಾಚಿಯ ಹಮ್ಲಾಲಂಡಿಯ ಮುರ್ತಾಜಾ ಚೋರಂಗಿ ಬಳಿ ಜಪಾನ್ ಪ್ರಜೆಗಳಿದ್ದ ವಾಹನಗಳ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ಜಪಾನ್ ನಾಗರಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ವಿದೇಶಿ ಪ್ರಜೆಗಳು ಕ್ಲಿಫ್ಟನ್ ನಲ್ಲಿರುವ ತಮ್ಮ ನಿವಾಸದಿಂದ ರಫ್ತು ಸಂಸ್ಕರಣಾ ವಲಯಕ್ಕೆ ಹೈಸ್ ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲಾ ಐವರು ಜಪಾನಿಯರು ಸುರಕ್ಷಿತವಾಗಿದ್ದಾರೆ ಆದರೆ ಅವರ ಜೊತೆಗಿದ್ದ ಖಾಸಗಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಭಯೋತ್ಪಾದಕರಿಂದ ಆರು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಎಸ್‌ಎಂಜಿ ಮತ್ತು ಮೂರು ಮ್ಯಾಗಜೀನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಕೋರರ ಬ್ಯಾಗ್ ನಲ್ಲಿ ಎರಡು ಬಾಟಲ್ ಪೆಟ್ರೋಲ್ ಕೂಡ ಇತ್ತು. ಎಲ್ಲಾ ವಸ್ತುಗಳು ದಾಳಿಕೋರರ ಬಳಿ ಚೀಲದಲ್ಲಿದ್ದವು. ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ ಮತ್ತು ಇನ್ನೊಬ್ಬ ಭಯೋತ್ಪಾದಕ ವ್ಯಾನ್ ಬಳಿ ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಎನ್ ಕೌಂಟರ್ ಆರಂಭಿಸಿದ್ದರು.