ಮಂಗಳೂರು : ಧರ್ಮಸ್ಥಳ ದೇವಸ್ಥಾನದ ವಿರುದ್ಧ ಹೂಡಿದ ಷಡ್ಯಂತ್ರ ಬಯಲಾಗುತ್ತಿದ್ದಂತೆ ದೂರುದಾರೆ ಸುಜಾತ ಭಟ್‌ಗೆ ಗೇಟ್‌ಪಾಸ್ ನೀಡಲಾಗಿದ್ದು ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಅಂತರ ಕಾಯ್ದುಕೊಂಡಿದೆ.
ತಾವೇ ಸೃಷ್ಟಿಸಿದ ಅನನ್ಯಾ ಭಟ್ ಕಟ್ಟು ಕಥೆಯ ವಿಚಾರ ಬಯಲಾಗುತ್ತಿದ್ದಂತೆ ತಿಮರೋಡಿ ಮನೆಯಲ್ಲಿ ಸುಜಾತ ಭಟ್‌ಗೆ ಅವಕಾಶ ನಿರಾಕರಿಸಲಾಗಿದೆ. ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತಿರುವ ಸುಜಾತ ಭಟ್ ಈಗ ಉಜಿರೆಯ ಲಾಡ್ಜ್‌ನಲ್ಲಿ ತಂಗಿದ್ದು ಅಲ್ಲಿಂದ ರಿಕ್ಷಾದ ಮೂಲಕ ಬೆಳ್ತಂಗಡಿ ಠಾಣೆಗೆ ಆಗಮಿಸುತ್ತಿದ್ದಾರೆ.
ಬುರುಡೆ ರಹಸ್ಯ ಬಯಲಾಗುವ ಮೊದಲು ಮಹೇಶ್ ಶೆಟ್ಟಿ ತಿಮರೋಡಿ ಕಡೆಯವರಿಗೆ ಸಂಬಂಧಿಸಿದ ಕಾರಿನಲ್ಲಿ ಸುಜಾತ ಭಟ್ ಆಗಮಿಸುತ್ತಿದ್ದರು. ಅಷ್ಟೇ ಅಲ್ಲದೇ ತಿಮರೋಡಿ ಮನೆಯಲ್ಲಿ ಉಳಿದುಕೊಂಡಿದ್ದರು ಮತ್ತು ಅಲ್ಲಿಯೇ ಕೆಲ ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನ ನೀಡಿದ್ದರು. ಈಗ ಸುಳ್ಳಿನ ಕಥೆ ಬಯಲಾಗುತ್ತಿದ್ದಂತೆ ಮನೆಯಿಂದ ತಿಮರೋಡಿ ಸುಜಾತ ಭಟ್‌ಗೆ ಗೇಟ್‌ಪಾಸ್ ನೀಡಿದ್ದಾರೆ.
ಉಡುಪಿ ಕೋರ್ಟ್ ಜಾಮೀನು ನೀಡಿದ ಬಳಿಕ ಪ್ರತಿಕ್ರಿಯಿಸಿದ್ದ ತಿಮರೋಡಿ, ಸುಜಾತ ಭಟ್‌ಗ್ ನಮಗೂ ಯಾವುದೇ ಸಂಬಂಧ ಇಲ್ಲ. ಅವರು ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು ಅಷ್ಟೇ. ನಮ್ಮದು ಸೌಜನ್ಯ ಪರವಾದ ಹೋರಾಟ ಎಂದರು.















