ಚೆನ್ನೈ: ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸಿ ಎಸ್ ಕೆ ನಾಯಕ ಧೋನಿ ಬಳಿ ಓಡಿ ಬಂದು ತಮ್ಮ ಶರ್ಟ್ ಮೇಲೆ ಎಂ.ಎಸ್.ಧೋನಿ ಅವರ ಆಟೋಗ್ರಾಫ್ ತೆಗೆದುಕೊಂಡ ಅಪರೂಪದ ಘಟನೆಗೆ ಚೆನ್ನೈನ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಯಿತು.
ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವಾಡಿದ್ದು, ಪಂದ್ಯದಲ್ಲಿ ಚೆನ್ನೈ ಸೋಲನುಭವಿಸಿದೆ. ಆದರೆ ಕೊನೆಯ ಲೀಗ್ ಪಂದ್ಯವಾದ ಕಾರಣ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಸ್ಟೇಡಿಯಂನತ್ತ ಚೆಂಡುಗಳನ್ನು ಎಸೆದರು.
ಅದೇ ಕ್ಷಣದ ನಂತರ ಧೋನಿ ಮತ್ತು ಗವಾಸ್ಕರ್ ಹಗ್ ಮಾಡಿಕೊಂಡರು.
ತನ್ನ ಶರ್ಟ್ ಮೇಲೆ ಧೋನಿಯ ಹಸ್ತಾಕ್ಷರವನ್ನು ಪಡೆದ ನಂತರ, ಗವಾಸ್ಕರ್ ಅವರು ಕಾಮೆಂಟರಿಯಲ್ಲಿ “ದಯವಿಟ್ಟು ಉಳಿದ ಪಂದ್ಯಗಳಿಗೆ ನನಗೆ ಹೊಸ ಗುಲಾಬಿ ಶರ್ಟ್ ನೀಡಿ” ಎಂದು ಹೇಳಿದರು.