ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ʼವೆಟ್ಟಯ್ಯನ್ʼ ಸಿನಿಮಾದ ಬಳಿಕ ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದ ತಯಾರಿಯಲ್ಲಿ ಲೋಕೇಶ್ ನಿರತರಾಗಿದ್ದಾರೆ. ಈ ನಡುವೆ ʼತಲೈವಾʼಅವರ ಮುಂದಿನ ಸಿನಿಮಾದ ಬಗ್ಗೆ ಸುದಿಯೊಂದು ಹೊರಬಿದ್ದಿದೆ.
ʼಪರಿಯೆರುಮ್ ಪೆರುಮಾಳ್ʼ, ʼಕರ್ಣನ್ʼ ಹಾಗೂ ಇತ್ತೀಚೆಗೆ ಬಂದ ʼಮಾಮಣ್ಣನ್ʼ ಮೂಲಕ ಸದ್ದು ಮಾಡಿರುವ ಖ್ಯಾತ ನಿರ್ದೇಶಕ ಮಾರಿ ಸೆಲ್ವರಾಜ್ ರಜಿನಿಕಾಂತ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ರಜಿನಿಕಾಂತ್ ಅವರು ʼತಲೈವರ್ 172ʼ ಸಿನಿಮಾಕ್ಕಾಗಿ ಒನ್ ಲೈನ್ ಸ್ಟೋರಿ ಕೇಳಿ, ಮಾರಿ ಸೆಲ್ವರಾಜ್ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಸೋಶಿಯಲ್ ಡ್ರಾಮಾದ ಕಥೆಯನ್ನೊಳಗೊಳ್ಳಲಿದೆ ಎನ್ನಲಾಗಿದೆ.
ರಜಿನಿಕಾಂತ್ ಇನು 2-3 ವರ್ಷ ನಿರಂತರ ಸಿನಿಮಾ ಮಾಡುವ ಯೋಜನೆಯಲ್ಲಿದ್ದು, ಮುಂದೆ ʼಜೈಲರ್ʼ ಸಿನಿಮಾದ ನಿರ್ದೇಶಕ ನೆಲ್ಸನ್ ಅವರೊಂದಿಗೆ ಮತ್ತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಮಾರಿ ಸೆಲ್ವರಾಜ್ ಅವರರೊಂದಿಗೆ ಸಿನಿಮಾದ ಬಗ್ಗೆ ಮುಂದೆ ಅಧಿಕೃತವಾಗಿ ಘೋಷಣೆ ಆಗಲಿದೆ.