ಮನೆ ಕೃಷಿ ರೈತ ಸಂಘಟನೆಗಳ ಪ್ರಣಾಳಿಕೆ ಒಪ್ಪಿಕೊಂಡ ಪಕ್ಷಕ್ಕೆ ಬೆಂಬಲ: ಕುರುಬೂರು ಶಾಂತಕುಮಾರ್

ರೈತ ಸಂಘಟನೆಗಳ ಪ್ರಣಾಳಿಕೆ ಒಪ್ಪಿಕೊಂಡ ಪಕ್ಷಕ್ಕೆ ಬೆಂಬಲ: ಕುರುಬೂರು ಶಾಂತಕುಮಾರ್

0

ಮೈಸೂರು:  ನಮ್ಮ ಪ್ರಣಾಳಿಕೆಯನ್ನು ಒಪ್ಪಿಕೊಂಡು ಬೆಂಬಲ ಸೂಚಿಸುವವ ಪಕ್ಷಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ರೈತ ಸಂಘಟನೆ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೈತರ ಹೆಸರನ್ನ ಹೇಳಿಕೊಂಡು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಬಳಿಕ ನಮ್ಮ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ವಿಫಲವಾಗುತ್ತಾರೆ. ಆಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾವು ಸಹ ರೈತರ ಸಮಸ್ಯೆ ಮತ್ತು ಬೇಡಿಕೆಯ ಕುರಿತು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಮೈಸೂರು ಬೆಂಗಳೂರು ಟೋಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಹೈವೇ ಕಾಮಗಾರಿ ಇನ್ನ ಪೂರ್ಣಗೊಂಡಿಲ್ಲ. ರೈತರ ಭೂಮಿ ಪಡೆದ ಮೇಲೆ ಕೆಲ ರೈತರಿಗೆ ಪರಿಹಾರವನ್ನೇ ನೀಡಿಲ್ಲ. ರೈತರ ವಾಹನಗಳಿಗೆ ಶುಲ್ಕ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.