ಮನೆ ಕಾನೂನು ಈಶ ಫೌಂಡೇಶನ್‌ ವಿರುದ್ಧ ತನಿಖೆ-ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಈಶ ಫೌಂಡೇಶನ್‌ ವಿರುದ್ಧ ತನಿಖೆ-ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

0

ನವದೆಹಲಿ: ಈಶ ಫೌಂಡೇಶನ್‌ ವಿರುದ್ಧ ದಾಖಲಾದ ಪ್ರಕರಣಗಳ ಬಗ್ಗೆ ತಮಿಳುನಾಡು ಪೊಲೀಸರು ತನಿಖೆ ನಡೆಸುವಂತೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌  ಗುರುವಾರ (ಅ.03) ತಡೆ ನೀಡಿದ್ದು, ಇದರಿಂದ ಆಧ್ಯಾತ್ಮಿಕ ಗುರು ಸದ್ಗುರು ವಾಸುದೇವ್‌ ಗೆ ರಿಲೀಫ್‌ ಸಿಕ್ಕಂತಾಗಿದೆ.

Join Our Whatsapp Group

ಈಶ ಫೌಂಡೇಶನ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಸ್ಟೇಟಸ್‌ ವರದಿ ಸಲ್ಲಿಸುವಂತೆ ತಮಿಳುನಾಡು ಪೊಲೀಸರಿಗೆ ಸೂಚನೆ ನೀಡಿದೆ.

ಮದ್ರಾಸ್‌ ಹೈಕೋರ್ಟ್‌ ತನಿಖೆಗೆ ಆದೇಶ ನೀಡಿದ ನಂತರ ಮಂಗಳವಾರ ನೂರಾರು ಪೊಲೀಸರು ಕೊಯಂಬತ್ತೂರಿನಲ್ಲಿರುವ ಈಶ ಫೌಂಡೇಶನ್‌ ಗೆ ತೆರಳಿದ್ದರು. ಬಳಿಕ ಈಶ ಫೌಂಡೇಶನ್‌ ಮದ್ರಾಸ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು.

ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಗೀತಾ ಮತ್ತು ಲತಾಳ ಬ್ರೈನ್‌ ವಾಶ್‌ ಮಾಡಿ ಕೊಯಂಬತ್ತೂರಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ನಿವೃತ್ತ ಪ್ರೊಫೆಸರ್‌ ಎಸ್.ಕಾಮರಾಜ್‌ ಅವರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌ ತನಿಖೆಗೆ ಆದೇಶ ನೀಡಿತ್ತು.