ಮನೆ ಕಾನೂನು ಆರ್’​ಟಿಐ ಆನ್‌’ಲೈನ್ ಪೋರ್ಟಲ್ ಪ್ರಾರಂಭಿಸಿದ ಸುಪ್ರೀಂ ಕೋರ್ಟ್

ಆರ್’​ಟಿಐ ಆನ್‌’ಲೈನ್ ಪೋರ್ಟಲ್ ಪ್ರಾರಂಭಿಸಿದ ಸುಪ್ರೀಂ ಕೋರ್ಟ್

0

ನವದೆಹಲಿ(Newdelhi): ಸುಪ್ರೀಂ ಕೋರ್ಟ್ ಗುರುವಾರ ತನ್ನ ಮಾಹಿತಿ ಹಕ್ಕು ಕಾಯ್ದೆ (ಆರ್‌’ಟಿಐ) ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಈ ಮೂಲಕ ಸಲ್ಲಿಸಬಹುದು.

ಇದೇ ಮಂಗಳವಾರ ಸುಪ್ರೀಂ ಕೋರ್ಟ್ ಆನ್‌’ಲೈನ್ ಪೋರ್ಟಲ್‌’ನ ಟೆಸ್ಟ್​ ವರ್ಷನ್ ಅನ್ನು ಸಕ್ರಿಯಗೊಳಿಸಿದೆ. ಆನ್‌`ಲೈನ್ ಆರ್‌`ಟಿಐ ಪೋರ್ಟಲ್ ಶೀಘ್ರದಲ್ಲೇ ಸಕ್ರಿಯವಾಗಲಿದೆ ಎಂದು ಇಂದು ಬೆಳಗ್ಗೆ ವಿಚಾರಣೆ ಪ್ರಾರಂಭಿಸುವ ಮೊದಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಘೋಷಿಸಿದರು.

ಸುಪ್ರೀಂ ಕೋರ್ಟ್‌’ನ ಆರ್‌’ಟಿಐ ಪೋರ್ಟಲ್‌ ಸಿದ್ಧವಾಗಿದ್ದು, 15 ನಿಮಿಷಗಳಲ್ಲಿ ಕಾರ್ಯನಿರ್ವಹಿಸಲಿದೆ. ಗಂಭೀರ ಸಮಸ್ಯೆಗಳಿದ್ದಲ್ಲಿ ನಾವು ಅದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಆರ್‌’ಟಿಐ ಅರ್ಜಿ, ಮೊದಲ ಮೇಲ್ಮನವಿ ಸಲ್ಲಿಸಲು ಮತ್ತು ಶುಲ್ಕ, ನಕಲು ಶುಲ್ಕಗಳ ಪಾವತಿ ಇತ್ಯಾದಿಗಳಿಗೆ ಭಾರತೀಯ ನಾಗರಿಕರು ಮಾತ್ರ ಈ ಪೋರ್ಟಲ್ ಅನ್ನು ಬಳಸಬಹುದು. ಅರ್ಜಿದಾರರು ನಿಗದಿತ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಮಾಸ್ಟರ್/ವೀಸಾ ಅಥವಾ ಯುಪಿಐನ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು. ಪ್ರತಿ ಆರ್‌’ಟಿಐ ಅರ್ಜಿ ಶುಲ್ಕ 10 ರೂಪಾಯಿ ಆಗಿದೆ.

ಈವರೆಗೆ ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ ಆರ್‌ಟಿಐ ಅರ್ಜಿಗಳನ್ನು ಭೌತಿಕವಾಗಿ ಸಲ್ಲಿಸಬೇಕಾಗಿತ್ತು. ಆನ್‌ಲೈನ್ ಆರ್‌’ಟಿಐ ಪೋರ್ಟಲ್‌ ಆರಂಭಿಸುವಂತೆ ಹಲವಾರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪಿಐಎಲ್ ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗಿತ್ತು.

ಕಳೆದ ವಾರ ಇಂಥ ಒಂದು ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ಶೀಘ್ರದಲ್ಲೇ ಪೋರ್ಟಲ್ ಆರಂಭಿಸಲಾಗುವುದು ಎಂದು ಹೇಳಿತ್ತು.

ಹಿಂದಿನ ಲೇಖನರಾಜ್ಯದಲ್ಲಿ ಇನ್ನೆರಡು ದಿನ ಮಳೆ: ಹವಾಮಾನ ಇಲಾಖೆ
ಮುಂದಿನ ಲೇಖನ`ಟಿಪ್ಪು ನಿಜಕನಸುಗಳು’ ಪುಸ್ತಕದಲ್ಲಿ ಶೇ. 99 ಭಾಗ ಸುಳ್ಳು: ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್