ಮನೆ ಕಾನೂನು ನೂಪುರ್ ಶರ್ಮಾ ಹೇಳಿಕೆ: ಟೈಮ್ಸ್ ನೌ ನಿರೂಪಕಿ ನಾವಿಕಾ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ...

ನೂಪುರ್ ಶರ್ಮಾ ಹೇಳಿಕೆ: ಟೈಮ್ಸ್ ನೌ ನಿರೂಪಕಿ ನಾವಿಕಾ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಆದೇಶ

0

ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರು ಟೈಮ್ಸ್‌ ನೌ ಸುದ್ದಿ ವಾಹಿನಿಯಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಚಾನೆಲ್‌ನ ನಿರೂಪಕಿ ನಾವಿಕಾ ಕುಮಾರ್‌ ಅವರ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳ ನಂತರ ವಿಚಾರಣೆ ನಡೆಯಲಿದೆ. ನಾವಿಕಾ ಪರ ವಾದ ಮಂಡಿಸಿದ ಮುಕುಲ್‌ ರೋಹಟ್ಗಿ, ನಿರೂಪಕಿ ಏನನ್ನೂ ಹೇಳಲಿಲ್ಲ. ಬದಲಾಗಿ ಆಕೆ ಚರ್ಚೆಯ ಉದ್ವಿಗ್ನ ಸ್ಥಿತಿ ಶಮನಗೊಳಿಸಲು ಯತ್ನಿಸಿದರು ಎಂದರು.

 ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ಹೆಚ್ಚುವರಿ ಆಸಕ್ತಿಗೆ ಆಕ್ಷೇಪಿಸಿದರು. ಕುಮಾರ್ ವಿರುದ್ಧದ ವಿಚಾರಣೆಗೆ ತಡೆ ನೀಡುವಂತೆ ರೋಹಟ್ಗಿ ಕೋರಿದಾಗ, ನ್ಯಾಯಮೂರ್ತಿ ಕೊಹ್ಲಿ ಉಳಿದ ಪ್ರತಿವಾದಿಗಳೂ ವಿಚಾರಣೆಗೆ ಹಾಜರಾಗಲಿ ಎಂದರು.