ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್ ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲೀಕ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಿಚಾರಣಾಧೀನ ನ್ಯಾಯಾಲಯದಲ್ಲೇ ಜಾಮೀನು ಅರ್ಜಿ ಸಲ್ಲಿಸಲು ಮಲೀಕ್ ಗೆ ಕೋರ್ಟ್ ಸೂಚಿಸಿದೆ.
ಹಿರಿಯ ಅಡ್ವೊಕೇಟ್ ಕಪಿಲ್ ಸಿಬಲ್ ಮಲೀಕ್ ಪರ ವಾದ ಮಂಡಿಸಿದ್ದು, 1999 ರಲ್ಲಿ ನಡೆದ ಅಪರಾಧವೊಂದಕ್ಕೆ 2022 ರಲ್ಲಿ ಮಲೀಕ್ ಅವರನ್ನು ಬಂಧಿಸಿದ್ದನ್ನು ಪ್ರಶ್ನಿಸಿದ್ದರು.
ಜಾರಿ ನಿರ್ದೇಶನಾಲಯ ಎನ್ ಸಿಪಿ ನಾಯಕನನ್ನು ಫೆ.23 ರಂದು ಬಂಧಿಸಿತ್ತು. ಭೂಗತ ಜಗತ್ತು ಹಾಗೂ ದಾವೂದ್ ಇಬ್ರಾಹಿಮ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿತ್ತು.