ನವದೆಹಲಿ: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿರ್ಬಂಧ ಹೇರಿರುವ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾ. ಮನಮೋಹನ್ ಅವರ ದ್ವಿಸದಸ್ಯ ಪೀಠವು, ಸಿನಿಮಾಗೆ ತಡೆಯೊಡ್ಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಯಾರದ್ದೋ ಭಾವನೆಗೆಳಿಗೆ ಧಕ್ಕೆಯಾಗುತ್ತದೆ ಎಂದು ಸಿನಿಮಾ, ಸ್ಟ್ಯಾಂಡ್ ಅಪ್ ಕಾಮಿಡಿ ಅಥವಾ ಕವನ ವಾಚನಗಳಿಗೆ ತಡೆ ನೀಡಲಾಗುತ್ತದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಭಾರತದಲ್ಲಿ ಭಾವನೆಗಳಿಗೆ ಧಕ್ಕೆ ಉಂಟಾಗುವ ಪ್ರಸಂಗಗಳಿಗೆ ಕೊನೆ ಎಲ್ಲಿದೆ? ಹಾಸ್ಯ ಕಲಾವಿದರು ಏನಾದರೂ ಹೇಳಿದರೆ ಕೆಲವರ ಭಾವನೆಗಳಿಗೆ ಧಕ್ಕೆಯುಂಟಾಗಿ ಪ್ರತಿಭಟನೆ ನಡೆಸಿ ವಿಧ್ವಂಸಕತೆ ಮೆರೆಯುತ್ತಾರೆ. ಹೀಗಾದರೆ ನಾವು ಎತ್ತ ಸಾಗುತ್ತಿದ್ದೇವೆ? ಒಂದು ಪ್ರತಿಭಟನೆಗಾಗಿ ಸಿನಿಮಾ ಪ್ರದರ್ಶನ ನಿಲ್ಲಿಸಬೇಕೇ ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿಗೆ ತಡೆ ನೀಡಬೇಕೇ ಅಥವಾ ಕವನ ವಾಚನಕ್ಕೆ ತೆರೆ ಎಳೆಯಬೇಕೇ’ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದೆ.
ಪ್ರಕರಣ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಸಿನಿಮಾ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ. ಸಿನಿಮಾ ಬಿಡುಗಡೆಗೆ ತಡೆಯೊಡ್ಡಲು ಪ್ರತಿಭಟನೆ ನಡೆಸಿ ಅಶಾಂತಿ ಸೃಷ್ಟಿಸಿದಲ್ಲಿ ಅಂಥ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ರಾಜ್ಯಸರ್ಕಾರ ಕ್ರಿಮಿನಲ್ ಹಾಗೂ ಸಿವಿಲ್ ಕಾನೂನಡಿ ಕಠಿಣ ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಕನ್ನಡತಮಿಳಿನಿಂದಹುಟ್ಟಿದೆಎಂಬಕೇಳಿಕೆನೀಡಿದ್ದಕ್ಕೆಕ್ಷಮೆಕೇಳುವಂತೆಹಿರಿಯನಟಕಮಲ್ಹಾಸನ್ಅವರನ್ನುಆಗ್ರಹಿಸಿದಕರ್ನಾಟಕಚಲನಚಿತ್ರವಾಣಿಜ್ಯಮಂಡಳಿಯಕ್ರಮವನ್ನೂಸುಪ್ರೀಂಕೋರ್ಟ್ಪ್ರಶ್ನಿಸಿದೆ.
ಮಂಡಳಿಪರವಕೀಲರುಕಮಲ್ ಗೆ ಮಂಡಳಿಯುಯಾವುದೇಬೆದರಿಕೆಒಡ್ಡಿಲ್ಲ. ಆದರೆಹೇಳಿಕೆಕುರಿತುವ್ಯಾಪಕಪ್ರತಿಭಟನೆನಡೆದಿತ್ತು. ಮಂಡಳಿಯಕಚೇರಿಯನ್ನುನುಗ್ಗಿದಗುಂಪುಬೆದರಿಸಿದಬೆನ್ನಲ್ಲೇಕ್ಷಮೆಕೋರಿಎಂದುಪತ್ರಬರೆಯಲಾಗಿತ್ತುಎಂದುತಿಳಿಸಿದರು. ಈಬೆದರಿಕೆ ಕುರಿತುಮಂಡಳಿಯುಪೊಲೀಸರಿಗೆದೂರುನೀಡಿದೆಯೇ? ಮಂಡಳಿಯುನಿಜವಾಗಿಯೂಜನರಒತ್ತಡಕ್ಕೆಮಣಿಯಿತೇ? ನೀವುದೂರುನೀಡದೆ, ಪ್ರತಿಭಟನಾಕಾರರಹಿಂದೆಅವಿತುಕೊಂಡಿದ್ದೀರಿಎಂದುನ್ಯಾ. ಭುಯಾನ್ ಅವರುಮಂಡಳಿಯನ್ನುತರಾಟೆಗೆತೆಗೆದುಕೊಂಡರು.
ನ್ಯಾಯಾಲಯ ಹೊರಡಿಸುವ ಯಾವುದೇ ಆದೇಶಕ್ಕೆ ಮಂಡಳಿ ಬದ್ಧ ಎಂದು ಮಂಡಳಿ ಪರವಕೀಲರು ಪೀಠಕ್ಕೆತಿ ಳಿಸಿದರು. ಕಮಲ್ ಹಾಸನ್ಅವರರಾಜ್ ಕಮಲ್ಫಿಲ್ಮ್ಇಂಟರ್‌ನ್ಯಾನಷಲ್ ಸಂಸ್ಥೆಯಪರ ವಕೀಲರು ವಾದಿಸಿ, ‘ಈಗಾಗಲೇ ರೂ.30 ಕೋಟಿನಷ್ಟ ಉಂಟಾಗಿದೆ. ಚಿತ್ರಪ್ರದರ್ಶನಕ್ಕೆ ಕರ್ನಾಟಕ ಸರ್ಕಾರ ರಕ್ಷಣೆ ನೀಡಿದಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ ಎಂದರು.














