ಮನೆ ರಾಜಕೀಯ ಬಿಬಿಎಂಪಿ ಚುನಾವಣೆ ಆಯೋಜಿಸುವಂತೆ ಸುಪ್ರೀಂ ಸೂಚನೆ

ಬಿಬಿಎಂಪಿ ಚುನಾವಣೆ ಆಯೋಜಿಸುವಂತೆ ಸುಪ್ರೀಂ ಸೂಚನೆ

0

ನವದೆಹಲಿ(New Delhi): ವಾರ್ಡ್‌ಗಳ ಮರು ವಿಂಗಡಣೆ‌ ಹಾಗೂ ಒಬಿಸಿ ಮೀಸಲಾತಿ ಅಂತಿಮಗೊಳಿಸುವ ಕಾರ್ಯ ಪೂರ್ಣಗೊಂಡ ಕೂಡಲೇ ಬೃಹತ್ ಬೆಂಗಳೂರು ಮಹಾನಗರ‌ ಪಾಲಿಕೆ (ಬಿಬಿಎಂಪಿ)ಯ ಚುನಾವಣೆ ಆಯೋಜಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಶುಕ್ರವಾರ ಸೂಚಿಸಿದೆ.

ವಾರ್ಡ್‌ ಮರು ವಿಂಗಡಣೆ ಕಾರ್ಯ ಜಾರಿಯಲ್ಲಿದೆ. ಈ ಕುರಿತ ಪ್ರಕ್ರಿಯೆಯು 8 ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಬಿಬಿಎಂಪಿ ಚುನಾವಣೆ ಆಯೋಜಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ದ್ವಿಸದಸ್ಯ ಪೀಠದೆದುರು ರಾಜ್ಯ‌ ಸರ್ಕಾರದ ಪರ ವಕೀಲರು ಈ ವಿಷಯ ತಿಳಿಸಿದರು.

ವಾರ್ಡ್‌ ಮರು ವಿಂಗಡಣೆ ಹಾಗೂ ಮೀಸಲಾತಿ ಅಂತಿಮಗೊಳಿಸುವ ಸಂಬಂಧದ ಪ್ರಕ್ರಿಯೆ ಜಾರಿಯಲ್ಲಿದೆ. ಎಂಟು ವಾರಗಳೊಳಗೆ‌ ಈ ಕುರಿತ ಆದೇಶ ಪ್ರಕಟವಾಗಲಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರವು ಎಂಟು ವಾರಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ, ಈ‌ ಸಂಬಂಧದ ತೀರ್ಮಾನ ಪ್ರಕಟಿಸಿದ ಒಂದು ವಾರದೊಳಗೆ‌ ಚುನಾವಣೆ ನಡೆಸುವ ಕುರಿತ ಅಧಿಸೂಚನೆ‌ ಹೊರಡಿಸುವಂತೆ ನ್ಯಾಯ ಪೀಠವು ರಾಜ್ಯ ಚುನಾವಣಾ‌ ಆಯೋಗಕ್ಕೆ ಸೂಚಿಸಿದೆ.

ಹಿಂದಿನ ಲೇಖನತ್ರಿಬಲ್ ರೈಡಿಂಗ್‌ : ಪೊಲೀಸರ ಕಂಡು ಯು ಟರ್ನ್ ತೆಗೆದುಕೊಳ್ಳುವ ವೇಳೆ ಅಪಘಾತ, ಇಬ್ಬರು ಸಾವು
ಮುಂದಿನ ಲೇಖನರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ: ಆರೋಪಗಳ ತನಿಖೆಗೆ ಆದೇಶ