‘ಸುಪ್ತ’ ಎಂದರೆ ಮಲಗಿರುವುದು ;‘ಕೋನ’ ಎಂದರೆ ಮೂಲೆ ಇದೂ ಕೂಡ ‘ಹಲಾಸನ’ದ ವ್ಯತ್ಯಸ್ತ ಭಂಗಿ. ಆದರೆ ಇದರಲ್ಲಿ ಕಾಲುಗಳನ್ನು ಅಗಲವಾಗಿ ಚಾಚಿಸಬೇಕು.
ಅಭ್ಯಾಸ ಕ್ರಮ
1. ಮೊದಲು ಕರ್ಣಪೀಡಾಸನದಿಂದ ಮುಂದೆ ಕಾಲುಗಳನ್ನು ಹಿಗ್ಗಿಸಿ, ನೇರವಾಗಿ ಇಟ್ಟು ಅವುಗಳನ್ನು ಸಾಧ್ಯವಾದಷ್ಟೂ ಅಗಲಿಸಿಡಬೇಕು.
2. ಬಳಿಕ, ಮುಂಡವನ್ನು ಸೆಳೆದು ಮೇಲೆಬ್ಬಿಸಿ ಮಂಡಿಗಳನ್ನು ಬಿಗಿಗೊಳಿಸಬೇಕು.
3. ಆಮೇಲೆ, ಬಲಗೈಯಿಂದ ಬಲಗಾಲ ಹೆಬ್ಬೆರಳನ್ನೂ ಎಡಗೈಯಿಂದ ಎಡಗಾಲಿ ನುಂಗುಟವನ್ನೂ ಹಿಡಿದು,ಹಿಮ್ಮಡಿಗಳನ್ನು ಮೇಲ್ಮೊಗ ಮಾಡಿರಬೇಕು.ಕಾಲುಗಳನ್ನು ಬಿಗಿಯಾಗಿ ಹಿಡಿದಮೇಲೆ, ಬೆನ್ನಬಳಿಯಿರುವ ಎದೆಯ ಭಾಗವನ್ನು ಮತ್ತಷ್ಟು ಮೇಲೆತ್ತಿ ಜಾನುರಜ್ಜುಗಳ ಮಾಂಸ ಖಂಡಗಳನ್ನು ಮುಂಗಡಗೆ ಹಿಗ್ಗಿಸಬೇಕು.
4. ಈ ಆಸನದ ಭಂಗಿಯಲ್ಲಿ 20 30 ಸೆಕೆಂಡುಗಳ ಕಾಲ ನಿಲ್ಲಿಸಿ,ಸಾಮಾನ್ಯ ಉಸಿರಾಟ ನಡೆಸಬೇಕು.
ಪರಿಣಾಮಗಳು
ಈ ಆಸನದ ಭಂಗಿಯು ಕಾಲುಗಳಿಗೆ ಹುರುಪಕೊಟ್ಟು, ಕಿಬ್ಬೊಟ್ಟೆಯೊಳಗಿನ ಅಂಗಗಳು ಸಂಕೋಚನಸ್ಥಿತಿಯನ್ನು ಪಡೆಯಲು ಅನುಕೂಲ ಕಲ್ಪಿಸುತ್ತದೆ.
Saval TV on YouTube