ಮನೆ ಕಾನೂನು ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ತನಿಖಾಧಿಕಾರಿಗಳ ನೇಮಕ

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ತನಿಖಾಧಿಕಾರಿಗಳ ನೇಮಕ

0

ಹಾಸನ: ಸಲಿಂಗ ಕಾಮ ಕೇಸ್​ನಲ್ಲಿ ಹೆಚ್​.ಡಿ.ರೇವಣ್ಣ ಪುತ್ರ, ಜೆಡಿಎಸ್​ ಎಂಎಲ್​ಸಿ ಸೂರಜ್​ ರೇವಣ್ಣ ಜೈಲು ಸೇರಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ನಿನ್ನೆ ರಾತ್ರಿಯಿಂದಲೇ ಪರಪ್ಪನ ಅಗ್ರಹಾರ ಕ್ವಾರಂಟೈನ್ ಸೆಲ್ ​ನಲ್ಲಿ ಸೂರಜ್​ಗೆ ವಿಚಾರಣಾಧೀನ ಕೈದಿ ನಂಬರ್​ 6141 ಕೊಡಲಾಗಿದೆ.

Join Our Whatsapp Group

ಹೊಳೆನರಸೀಪುರ ಗ್ರಾ. ಠಾಣೆ ಪೊಲೀಸರು ತಡರಾತ್ರಿ ಸಿಐಡಿ ಕಚೇರಿಗೆ ಕೇಸ್ ಫೈಲ್ ಹಸ್ತಾಂತರಿಸಿದ್ದಾರೆ.

ಪ್ರಕರಣದ ಎಸ್​ಪಿಪಿಯಾಗಿ ಅಶೋಕ್ ನಾಯಕ್ ನೇಮಕಗೊಂಡಿದ್ದು ಪ್ರಕರಣ ಸಂಬಂಧ ಅಶೋಕ್ ನಾಯಕ್ ವಾದ ಮಂಡಿಸಲಿದ್ದಾರೆ. ಇನ್ನು ಪ್ರಕರಣದ ತನಿಖಾಧಿಕಾರಿಗಳಾಗಿ ಸಿಐಡಿ ಎಸ್​ಪಿ ವೆಂಕಟೇಶ್, ಡಿವೈಎಸ್​ಪಿ ಉಮೇಶ್, ಇನ್ಸ್​ಪೆಕ್ಟರ್ ನರೇಂದ್ರ ಬಾಬು ನೇಮಕಗೊಂಡಿದ್ದಾರೆ. ಸದ್ಯ ತನಿಖಾ ತಂಡ ಕೋರ್ಟ್​ಗೆ ಬಾಡಿ ವಾರಂಟ್ ಮನವಿ ಸಲ್ಲಿಸಿದೆ. ಬಾಡಿ ವಾರಂಟ್ ಮೂಲಕ ಸೂರಜ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತೆ.

ಹಿಂದಿನ ಲೇಖನಗುಂಡ್ಲುಪೇಟೆ: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ
ಮುಂದಿನ ಲೇಖನಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ: ಸೂರಜ್ ರೇವಣ್ಣ ಜುಲೈ 1ರವರೆಗೆ ಸಿಐಡಿ ವಶಕ್ಕೆ