ಬೆಂಗಳೂರು(Bengaluru): ರಾಜ್ಯದ ಮುಸ್ಲಿಂರಿಗೆ ಮೌಲ್ವಿಗಳು ಪ್ರಚೋದಿಸುತ್ತಿದ್ದು, ರಾಜ್ಯದಲ್ಲಿ ಮೌಲ್ವಿಗಳ ಸರ್ವೆ ಆಗಬೇಕು. ಮಸೀದಿಗಳಲ್ಲಿ ಏನೇನಿದೆ ಸಮೀಕ್ಷೆ ನಡೆಸಬೇಕೆದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಮೌಲ್ವಿಗಳ ಸರ್ವೆ ಆಗಬೇಕು. ಉತ್ತರ ಪ್ರದೇಶ, ಬಿಹಾರದಿಂದ ಮೌಲ್ವಿಗಳು ಬರುತ್ತಾರೆ. ರಾಜ್ಯದ ಮುಸ್ಲಿಂರ ತಲೆ ಹಾಳು ಮಾಡುತ್ತಾರೆ. ಇಂಥ ಮೌಲ್ವಿಗಳನ್ನ ವಾಪಸ್ ಕಳಿಸಬೇಕು. ಬುರ್ಖಾ ಜುಬ್ಬಾ ಗಡ್ಡ ಬಿಡೋದು ಹೆಚ್ಚುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಮುಸ್ಲಿಂರು ಹಿಂದೂಗಳು ಸಾಮರಸ್ಯದಿಂದ ಇದ್ದರು. ಕಳೆದ 10 ವರ್ಷದಿಂದ ಹಿಂದು ಮುಸ್ಲಿಂ ಸಾಮರಸ್ಯ ಹಾಳಾಗುತ್ತಿದೆ. ಪ್ರತ್ಯೇಕ ಭಾವನೆ ಬೆಳೆಯುತ್ತಿದೆ. ಮಸೀದಿಗಳಲ್ಲಿ ತಲ್ವಾರ್, ಶಸ್ತ್ರಾಸ್ತ್ರ ಇದೆಯ ಪರಿಶೀಲಿಸಿಬೇಕು ಎಂದು ಆಗ್ರಹಿಸಿದರು.