Saval TV on YouTube
ದುಬೈ: ಭಾರತದ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟಿಸಲಾದ ಐಸಿಸಿ ಟಿ20 ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್ ಟೂರ್ನಿಯಲ್ಲಿನ ಉತ್ತಮ ಆಟದಿಂದಾಗಿ ಸೂರ್ಯ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸದ್ಯ ಅವರ ಬಳಿ 859 ರೇಟಿಂಗ್ ಪಾಯಿಂಟ್ಗಳಿವೆ.
ವಿಶ್ವಕಪ್ ಟೂರ್ನಿಯ ಐದು ಇನಿಂಗ್ಸ್’ಗಳಲ್ಲಿ ಸೂರ್ಯ ಅವರು 59.75ರ ಸರಾಸರಿ ಮತ್ತು 189.68ರ ಸ್ಟ್ರೈಕ್ರೇಟ್ನಲ್ಲಿ 239 ರನ್ ಗಳಿಸಿದ್ದರು.
ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನದಲ್ಲಿದ್ದರೆ, ಬಾಬರ್ ಆಜಂ ಮೂರನೇ ಸ್ಥಾನದಲ್ಲಿದ್ದಾರೆ.