ಉಡುಪಿ : ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿದ್ದಾರೆ.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಗಳು ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತುಅಭಿವೃದ್ಧಿ ಸಮಿತಿ ವತಿಯಿಂದ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ದೇವಸ್ಥಾನದ ಪ್ರಾಂಗಣದ ಮುಂದಿರುವ ಬೃಹತ್ ಕಲ್ಲಿನ ಕಂಬವನ್ನು ಸೇವೆ ರೂಪದಲ್ಲಿ ಸೂರ್ಯಕುಮಾರ್ ದಂಪತಿ ಕೊಟ್ಟಿದ್ದರು. ಆ ಕಂಬದ ಮುಂದೆ ದೇವಿಶಾ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಟಿ20 ಪಂದ್ಯವನ್ನು ಆಡುತ್ತಿದ್ದಾರೆ. ದೇವಿಶಾ ಶೆಟ್ಟಿ ಭರತನಾಟ್ಯ ಕಲಾವಿದೆಯಾಗಿದ್ದು ಮುಂಬೈನಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಜುಲೈ 7, 2016 ರಂದು ಸೂರ್ಯ ದೇವಿಶಾ ಶೆಟ್ಟಿ ಅವರನ್ನು ವಿವಾಹವಾಗಿದ್ದರು.















