ಸುಶ್ರುತ ಸಂಹಿತೆಯ ಕರ್ತೃ ಸುಶ್ರುತ. ಈತನನ್ನು ಭಾರತೀಯ ಶಸ್ತ್ರ ಚಿಕಿತ್ಸೆಯ ಮತ್ತು ಪ್ಲಾಸ್ಟಿಕ್ ಸರ್ಜರಿ (ಚರ್ಮವನ್ನು ಕಸಿ ಮಾಡುವ) ಯ ಪಿತಾಮಹ ಎಂದು ಗೌರವಿಸಲಾಗಿದೆ.
ಆತನ ಗುರು ಕಾಶಿರಾಜ ದೇವೊದಾಸ ಧನ್ನಂತರಿ ಎಂಬುದು ಸುಶ್ರುತ ಸಂಹಿತೆಯ ಉತ್ತರ ಅತ್ರಂ ಭಾಗದ 39 ನೇ ಅಧ್ಯಾಯದ 3 ಮತ್ತು 4 ನೇ ಶ್ಲೋಕದಿಂದ ತಿಳಿದುಬರುತ್ತದೆ. ಸುಶ್ರುತನ ಕಾಲಾವಧಿಯನ್ನು ಕ್ರಿ.ಪೂ. 600 ಇರಬಹುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಸುಶ್ರುತ ಸಂಹಿತೆಯಲ್ಲಿ ಪೂರ್ವದ ಮತ್ತು ಉತ್ತರ ತಂತ್ರ ಎಂಬ ಎರಡು ಮುಖ್ಯ ಭಾಗಗಳಿವೆ.
ಪೂರ್ವದ………..
1. ಸೂತ್ರ ಸ್ಥಾನ (46 ಅಧ್ಯಾಯಗಳು)
2. ನಿದಾನ ಸ್ಥಾನ (16 ಅಧ್ಯಾಯಗಳು)
3. ಶರೀರ ಸ್ಥಾನ (10 ಅಧ್ಯಾಯಗಳು)
4. ಚಿಕಿತ್ಸಾ ಸ್ಥಾನ (40 ಅಧ್ಯಾಯಗಳು)
5. ಕಲ್ಪ ಸ್ಥಾನ (8 ಅಧ್ಯಾಯಗಳು)
ಉತ್ತರ ತಂತ್ರ………
1. ಶಲ್ಯಕ ತಂತ್ರ (26 ಅಧ್ಯಾಯಗಳು)
2. ಕೌಮಾರ ನೃತ್ಯ (13 ಅಧ್ಯಾಯಗಳು)
3. ಕಾಯ ಚಿಕಿಸ್ಥ (21 ಅಧ್ಯಾಯಗಳು)
4. ಭೂತ ವಿದ್ಯೆ (3 ಅಧ್ಯಾಯಗಳು)
5. ತಂತ್ರಯುಕ್ (4 ಅಧ್ಯಾಯಗಳು)
ಸುಶ್ರುತ ಸಂಹಿತೆಯಲ್ಲಿ, ತ್ರಿಫಲವನ್ನು ಉಪಯೋಗಿಸಿ ಸೂಚಿಸಲಾಗಿರುವ ಕೆಲವು ಪ್ರಯೋಗಗಳ ಮೂಲ ಶ್ಲೋಕದೊಡನೆ ತಾತ್ಪರ್ಯವನ್ನು ಕೊಟ್ಟಿದೆ.
ಸುಶ್ರುತ ಸಂಹಿತಾ ಚಿಕಿತ್ಸಾ ಸ್ಥಾನಮ್
ಅಧ್ಯಾಯ – 1
1. ಶ್ರೇಷ್ಠ ಪ್ರಬಲೇ ಶಾಮಲಕರಿಹರಿದ್ರಾ ಕಷಾಯಂ |
2. ಮಧು ಮಧುರಂ ಪಾಯಯೇತ್ |
ತ್ರಿಫಲಾ ಕಷಾಯಂ ವಾ:……
ಕಷಾಧಿಕವಾಗಿರುವ ವಾತರಕ್ತ ರೋಗಿಗೆ ನೆಲ್ಲಿಕಾಯಿ ಅರಿಶಿಣಗಳ ಕಷಾಯಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿಸಬೇಕು. ತ್ರಿಫಲ ಕಷಾಯವನ್ನಾಗಲಿ ಜೇನುತುಪ್ಪ ಮ ಮಾಡಿ ಕುಡಿಸಬೇಕು.
ಅಧ್ಯಾಯ – 2
2 . *ಚನ್ನನಂ ಕರ್ಕಟಾಖ್ಯಾ ಚ ಸಹೇ ಮಾಂಸ್ಯಾಹ್ವಯಾಮೃತೆ || *ಹರೇಣವೊ ಮೃಣಾಳಂ ಚ ತ್ರಿಫಲಾ ಪದ್ಮಕೋತ್ಸಲಂ |
ತ್ರಯೋದಶಾಙ್ಗಂ ತ್ರಿವೃತ ಮೇತ ದ್ವಾಪಯ ಸಾನ್ವಿತಂ ||
ತೈಲಂ ವಿಪಕ್ವಂ ಸೇಕಾರ್ಥೆ ಹಿತಂತು ವ್ರಣರೋಪಣೇ |
ಶ್ರೀಗಂಧ, ಕರ್ಕಾಟಕ ಶೃಂಗಿ, ಕಾಡುಉದ್ದು, ಕಾಡು ಹೆಸರು, ಜಟಮಾಂಸಿ, ಅಮ್ಮತ ಬಳ್ಳಿ, ರೇಣುಕೆ ಬಿತ್ತ, ಲಾಮಂಚ, ತ್ರಿಫಲ, ಪದ್ಮಕ, ನೈದಿಲೆ, – ಇವುಗಳ ಕಷಾಯಕ್ಕೆ ತುಪ್ಪ ಎಳ್ಳೆಣ್ಣೆ, ಹಾಲು ಸೇರಿಸಿ ಸೇವಿಸಿದರೆ ವ್ರಣ ಗುಣವಾಗುತ್ತದೆ.
3 *. ಸಮಙ್ಖಾಂ ರಜನೀಂ ಪದ್ಮಾಂ ತ್ರಿವರ್ಗ೦ ತುತ್ತಮೇವ ಚ ||
ವಿಜಙ್ಗಂ ಕಟುಕಾಂ ಪಥ್ಯಾಂ ಗುಡೂಂ ಸಕರಞ್ಚಕಾಂ |
*ಸಹೃತ್ಯ ವಿಷಚೇತ್ಕಾಲೇ ತೈಲಂ ರೋಪೇಣ ಮುತ್ತಮಂ ||
ಮಂಜಿಷ್ಠ, ಅರಿಸಿನ, ಭಾರಂಗಿ, ತ್ರಿಫಲ, ಮೈಲ್ ತುತ್ತ, ವಾಯುವಿಳಂಗ, ಕಟುಕ ರೋಹಿಣಿ, ಅಳಲೆಕಾಯಿ, ಅಮೃತಬಳ್ಳಿ, ಹೊಂಗೆಯ ಬೀಜ ಇವುಗಳನ್ನು ಸೇರಿಸಿ ತಯಾರಿಸಿದ ತೈಲ ವ್ರಣವನ್ನು ವಾಸಿ ಮಾಡುತ್ತದೆ.
ಅಧ್ಯಾಯ – 4
ತಿಲ್ವ ಧೃತ
4. *ತ್ರಿವೃದ್ದ ಸುವರ್ಣ ಕ್ಷೀರೀ ಸಪ್ತಪಲಾಶಬ್ಬನೀ ತ್ರಿಫಲಾ |
ವಿಡಣ್ಣಾ ನಾಮಕ್ಷ ಸಮಾಃ ಕಲ್ಕ ಬಿಲ್ವಮಾತ್ರಃ ಕಲ್ಕ ಸ್ತಿಲ್ವಕ ಮೂಲಕಮ್ಮಿಲ್ಲಕಯೋಸ್ತ್ರಿ ಫಲಾರಸದಧಿತೇ ದ್ವೇ ದ್ವೇ
ಘೃತಪಾತ್ರ ಮೇಕಂ ತದೈಕಭ್ಯಂ ಸಂಸ್ಕೃಜ್ಯ ವಿಪಚೇತ್ ;
*ತಿಲ್ಲಕಸರ್ಪಿರೇತತ್ ಸ್ನೇಹ ವಿರೇಚನ *ಮುಪದಿಶನ್ನಿ
ವಾತ ರೋಗೇಷು ತಿಲ್ಲ?ಕವಿಧಿರೇವಾಶೋರಮ್ಮ’ ಕಯೋದ್ರ್ರಷ್ಟ ||
ತಿಗಡೆ ಬೇರು, ಜಾಪಾಳದ ತೊಗಟೆ, ಮರಳು ಉಮ್ಮತ್ತಿ (ದತ್ತೂರಿ), ಅರಿಸಿನ, ದೊಂಡುಗಳ್ಳಿ, ಈಶ್ವರಿ ಬೇರು, ತ್ರಿಫಲ, ವಾಯುವಿಳಂಗ, – ಇವುಗಳನ್ನು ಪ್ರತ್ಯೇಕವಾಗಿ ಒಂದೊಂದು ಕರ್ಷ ಪ್ರಮಾಣದಷ್ಟು ತೆಗೆದುಕೊಂಡು ನೀರಿನೊಡನೆ ಅರೆದು ಕಲ್ಯ ತಯಾರಿಸಬೇಕು. ಇದಕ್ಕೆ ತಲಾ ಒಂದು ಕರ್ಷ ಪ್ರಮಾಣದ ಲೋಧ್ರ ಬೇರಿನ ಚೂರ್ಣ ಮತ್ತು ಕಪಿಲೆಯ ಹಿಟ್ಟು ಸೇರಿಸಬೇಕು. ತ್ರಿಫಲ ಕಷಾಯ ಮತ್ತು ಮೊಸರು ಇವು ಪ್ರತಿಯೊಂದನ್ನು ಎರಡೆರಡು ಅಡಕಗಳು (4 ಅಳತೆಯ ಸೇರು) ಮತ್ತು ಹಸುವಿನ ತುಪ್ಪ 2 ಅಳತೆಯ ಸೇರಿನಷ್ಟು ಮಿಶ್ರಣ ಮಾಡಿ ಹದವಾಗಿ ಕುದಿಸಿ ಧೃತಪಾಕ ತಯಾರಿಸಬೇಕು. ಇದನ್ನು ತಿಲ್ವಘ್ನತ ಎಂದು ಕರೆಯುತ್ತಾರೆ. ಈ ಘೃತ ವಾತರೋಗ ಚಿಕಿತ್ಸೆಗೆ ಉಪಯುಕ್ತ (1 ಕರ್ಷ = 12 ಗ್ರಾಂ).
ಅಧ್ಯಾಯ – 5
5. ಶ್ರೇಷ್ಟ ಪ್ರಬಲೇ ತ್ವಾಮಲಕರಿಹರಿದ್ರಾ ಕಷಾಯಂ ಮಧು ಮಧುರಂ ಪಾಯಯೇತ್:
ತ್ರಿಫಲ ಕಷಾಯಂ ವಾ;……||
ಕಫ ಅಧಿಕವಾಗಿರುವ ವಾತರಕ್ತ ರೋಗಿಗಳಿಗೆ ಬೆಟ್ಟದ ನೆಲ್ಲಿಕಾಯಿ ಮತ್ತು ಅರಿಸಿನದ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಸಬೇಕು. ಇಲ್ಲವೆ ತ್ರಿಫಲ ಕಷಾಯವನ್ನು ಜೇನುತುಪ್ಪ ದೊಡನೆ ಕೊಡಬೇಕು.
6. ಪಟೋಲ ತ್ರಿಫಲಾಭೀರು ಗುಡೂಚೀ ಕಟುಕಾ ಕೃತಮ್ | ಕ್ವಾಥಂ ಪೀತ್ವಾ ಜಯತ್ಯಾಶು ವಾತಶೋಣಿತಜಾಂ ರುಜಮ್ ||
ಕಹಿಪಡವಲ, ತ್ರಿಫಲ, ಆಷಾಡಿ ಬೇರು, ಅಮೃತಬಳ್ಳಿ ಕಟುಕ ರೋಹಿಣಿ ಇವುಗಳ ಕಷಾಯವನ್ನು ಕುಡಿದರೆ ಬಹುಬೇಗ ವಾತರಕ್ತ ರೋಗದ ವೇದನೆಗಳು ನಿವಾರಣೆಯಾಗುತ್ತವೆ.
7.ತ್ರಿಫಲ ಚೂರ್ಣಂ ಕ್ಷೌದ್ರೇಣ ಕಟುಕಾನ್ವಿತಮ್ ||
ಊರುಸ್ತಂಬ ರೋಗದ ಚಿಕಿತ್ಸೆಗೆ, ತ್ರಿಫಲ ಮತ್ತು ಕಟುಕ ರೋಹಿಣಿಗಳ – ಚೂರ್ಣವನ್ನು ಜೇನುತುಪ್ಪದೊಡನೆ ಸೇವಿಸಲು ಕೊಡಬೇಕು.
ತಂ *ಪ್ರಾತಸ್ತ್ರಿ ಫಲಾದಾರ್ವಿ ಪಟೋಲ ಕುಶವಾರಿಭಿಃ ||
ಪಿಬೇದಾವಾಪ್ತ ವಾ ಮೂತ್ರೈ: ಕಾರೈರೂಷ್ಟೋ ದಕೇನ ವಾ | ಜೀರ್ಣೆ ಯೂಪರಸಕ್ಷೀರೈ ರ್ಭು ಇನೋ ಹನ್ತಿಮಾಸತಃ ||
*ಗುಲ್ಮಾಂ ಮೇಹಮುದಾವರ್ತ ಮುದರಂ ಸಭಗನ್ಧರಮ್ |
*ಕ್ರಿಮಿಕ ರುಚಿಶ್ಚ ತ್ರಾಣ್ಯರ್ಬುದ ಗ್ರಂಥಿಮೇವ*ಚ ॥
ನಾಡ್ಯಾಡ್ಯ ವಾತಶ್ವಯಥು ಕುಷ್ಠ ದುಷ್ಟ ವ್ರಣಾಂಶ್ಚ ಸಃ |
ಕೋ ಷ್ಟಸನ್ದ್ಯಸ್ಥಿಗಂ ವಾಯುಂ ವೃಕ್ಷಮಿನ್ನಾ ಶನಿರ್ಯ ಥಾ ॥
ಪ್ರಾತಃ ಕಾಲದಲ್ಲಿ ತ್ರಿಫಲ ಕಷಾಯ, ಮರದರಿಸಿನ* ಕಷಾಯ, ಪಟೋಲ ಕಷಾಯ, ದರ್ಭೆಯ ಕಷಾಯದೊಡನೆಯಾಗಲಿ, ಗೋಮೂತ್ರದಲ್ಲಿ ಕರಗಿಸಿ ತಯಾರಿಸಿದ ಮೂತ್ರವನ್ನು ಕುಡಿಯಬೇಕು. ಜೀರ್ಣವಾದ ನಂತರ ದ್ವಿದಳ ಧಾನ್ಯದ ಕಟ್ಟು, ಮಾಂಸರಸ, ಹಾಲು ಇವುಗಳನ್ನು ಮಿಶ್ರ ಮಾಡಿದ ಅನ್ನವನ್ನು ಸೇವಿಸಬೇಕು. ಇದೇ ರೀತಿ ಒಂದು ತಿಂಗಳು ಸೇವಿಸಿದರೆ ಗುಲ್ಮ, ಮೇಹ, ಮಲಬಂಧ, ಭಗಂದರ, ಕ್ರಿಮಿರೋಗ, ನವೆ, ಆರೋಚಕತೆ, ಬಿಳಿಯ ತೊನ್ನು, ದುರ್ಮಾಂಸದ ಗಂಟು, ಮೇದೋ ಗ್ರಂಥಿ ರೋಗಗಳು, ನಾಡಿ ವ್ರಣಗಳು, ಊರು ಸ್ತಂಭ ರೋಗ, ಶೋಥ, ಕುಷ್ಠರೋಗ, ದುಷ್ಟವಣ, ಕೋಷ್ಟ್ರ, ಸಂಧಿ ಮತ್ತು ಮೂಳೆಗಳಲ್ಲಿ ಆವರಿಸಿರುವ ವಾಯು ಇವುಗಳೆಲ್ಲ ಸಿಡಿಲು ಹೊಡೆದ ಮರವು ನಾಶವಾಗುವಂತೆ ನಿವಾರಣೆಯಾಗುತ್ತವೆ.