ಅಧ್ಯಾಯ – 10
16. ಪಲಾಶಭಸ್ಮ ಪರಿಸ್ರುತಸ್ಯ ಉದ್ಯೋದಕಸ್ಯ ಶೀತೀಭೂತಸ್ಕ |
. ತ್ರಯೋ ಬಾಗಾ ದೌ ಫಾಣಿತಸ್ಯೈ ಕಮರಿಷ್ಟಕಲ್ಲೇನ್ ವಿದದ್ಯಾತ್ |
ಏವಂ ತಿಲಾದೀನಾಂ ಕ್ಟಾರೇಷು ಸಾಲಸಾರಾದೌ ನೃಗೋದಾ |
ದಾವಾರಗ್ವಧಾದೌ ಮೂತೇಷು ಚಾಸಾರ್ವ ವಿದಧ್ಯಾತ್ ।।
ಬಿಸಿ ನೀರಿಗೆ ಮುತ್ತುಗದ ಭಸ್ಮವನ್ನು ಕದಡಿ ತಣ್ಣಗಾದ ಮೇಲೆ ಸೋಸಿಕೊಳ್ಳಬೇಕು. 3 ಭಾಗ ದ್ರಾವಣಕ್ಕೆ 2 ಭಾಗ ಎಳೆಪಾಕ ಬಂದಿರುವ ಬೆಲ್ಲವನ್ನು ಸೇರಿಸಿ ಅರಿಷ್ಟ ಕಲ್ಪದಂತೆ ಯವೆಯ ರಾಶಿಯಲ್ಲಿ ಹೂಳಬೇಕು ಇದೇ ರೀತಿ ಎಳ್ಳು ಕಟ್ಟಿ ಕಷಾಯ ಶಾಲಾ ಸರಾದಿ,ಕಷಾಯ, ನ್ಯೂಕ್ರೋಧಾದಿ ಕಷಾಯ, ಅರಗ್ನದಾದಿ ಕಷಾಯ ತಯಾರಿಸಿ ಗೋಮೂತ್ರ ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ ಯವ ಧಾನ್ಯದ ರಾಶಿಯಲ್ಲಿ 7 ದಿನಗಳವರೆಗೆ ಹೂಳಿಟ್ಟು ಅನಂತರ ಉಪಯೋಗಿಸುವುದರಿಂದ ಕುಷ್ಠರೋಗ ವಾಸಿಯಾಗುತ್ತದೆ.
ಅಧ್ಯಾಯ – 11
17 ತತಃ ಶುದ್ಧ ದೇಹ ಮಾಮಾಲಕರ ಸೇನಾ ಹರಿದ್ರಾಂ ಮಧುಸಯುಕ್ತಾಂ ಪಾಯಚೇತ್ ತ್ರಿಫಲ ವಿಶಾಲಾ
ದೇವದಾರು ಮುಸ್ತಕಷಾಯಂ ವಾ ಸಾಲಕಮಿಲ್ಲಕ
ಮುಷ್ಕಕ ಕಲ್ಕ ಮಕ್ಷಮಾತ್ರಂ ವಾ ಮದುಮಧುರ
ಮಾಮಲಕರ ಸೇನ ಹರಿದ್ರಾಯುತಮ್ ಕುಟಜಕ ಪಿತ್ಥರೋಹಿತ ವಿಭೀತಕ ಸಪ್ತಪರ್ಣ ಪುಷ್ಪಕಲ್ಕಂ ವಾ ನಿಮ್ಹಾರಗ್ವಧಸಪ್ತಪರ್ಣಿ *ಮೂರ್ವಾ ಕುಟಜ ಸೋಮವೃಕ್ಷ
ಪಲಾಶಾನಾಂ ವಾ ತ್ವಕತ್ರ ಮೂಲ ಫಲಪುಷ್ಪ ಕಷಾಯಣಿ*
ಏತ ಪಞ್ಚ ಪ್ರಯೋಗಾಃ ಸರ್ವಮೇಹಾನಾಮಪಹ ಸ್ವಾರೊ ವ್ಯಾಖ್ಯಾತಾಃ ॥
ದೇಹವನ್ನು ಶುದ್ಧಿ ಮಾಡುವ ಮೇಹ ರೋಗಿಗಳಿಗೆ –
1 ಅರಿಸಿನ – ಜೇನುತುಪ್ಪವನ್ನು ಮಿಶ್ರ ಮಾಡಿದ ಬೆಟ್ಟದ ನೆಲ್ಲಿಕಾಯಿ ರಸ.
2 *ತ್ರಿಫಲ, ದಾಸಮೆಕ್ಕೆ, ದೇವದಾರು, ಕೊನ್ನಾರಿಗೆಡ್ಡೆ ಇವುಗಳ ಕಷಾಯ
3 **ಸರ್ಜವೃಕ್ಷ, ಕಪಿಲೆಹಿಟ್ಟು ಮತ್ತು ಮುಳು ಬೆಟ್ಟದ ನೆಲ್ಲಿಕಾಯಿಯ ರಸ .
4. ಕೊಡಸಿಗನ ತೊಗಟೆ, ಬೇಲ, ಬಿಳಿಬೂರುಗ, ತಾರೆಕಾಯಿ, ಮದ್ದಾಲೆ ತೊಗಟೆ ಇವುಗಳ ಜೊತೆಗೆ ಹೂಗಳ ಕಲ್ಕ ಸೇರಿಸಿ ಕೊಡುವುದರಿಂದ
5. *ಬೇವು, ಕಕ್ಕೆ, ಮದ್ದಾಲೆಕ್ಕ, ಕೊರಟಿಗೆ, ಕೊಡಸಿಗೆ, ಬಿಳಿಜಾಲಿ, *ಮುತ್ತುಗದ ತೊಗಟೆ, ಎಲೆ, ಬೇರು, ಹಣ್ಣು, ಹೂ ಇವುಗಳ ಕಷಾಯ.ಖ್ಖ
*
ಈ 5 ಬಗೆಯ ಕಷಾಯಗಳಲ್ಲಿ ಯಾವುದನ್ನು ಸೇವಿಸಿದರೂ ಮೇಹರೋಗ ಗುಣವಾಗುತ್ತದೆ.
ಅಧ್ಯಾಯ 12
ನವಯಾಸ ಚೂರ್ಣ
18..ತ್ರಿಫಲಾಚಿತ್ರಕತ್ರಿಕಟುವಿಡಙ್ಗ ಮುಸ್ತಾನಾಂ ನವ
ಭಾಗಾಸ್ತವನ್ನ ಏವ ಕೃಷ್ಣಾಯಶೂರ್ಣಸ್ಯ ತತ್ಸರ್ವಮೇಕಥಂ ಕೃತ್ವಾಯಥಾ ಯೋಗಂ ಮಾತ್ರಾಂ ಸರ್ಪಿಮ್ರಧುಬ್ಬಾ೦ ಸಂಜ್ಯೋಪಯುತ ಏತನ್ನವಾಯುಸಮೇತೇನ *ಜಾಠರ್ಯಂ ನೆ ಭವತಿ ಸನ್ನೋಗ್ನಿ ರಾಪಯತೇ ದುರ್ನಾಮ ಸೋಫಪಾಣ್ಣುಕುಷ್ಠರೋಗವಿಪಾಕ ಕಾಸಶ್ವಾಸ ಪ್ರಮೇಹಾಶ್ಚ ನ ಭವಂತಿ ॥
ತ್ರಿಫಲ, ಚಿತ್ರಮೂಲ, ತ್ರಿಕಟು, ವಾಯುವಿಳಂಗ* , ಕೊನ್ನಾರಿಗೆಡ್ಡೆ – ಇವು 9 ಭಾಗಗಳು ಕರಿಕಬ್ಬಿಣದ ಪುಡಿ 9 ಭಾಗ, ಯೋಗಕ್ಕೆ ತಕ್ಕಂತೆ ತುಪ್ಪ, ಜೇನುತುಪ್ಪ, ಇವುಗಳನ್ನು ಸೇರಿಸಿ ಸೇವನೆ ಮಾಡಬೇಕು. ಈ ಮಿಶ್ರಿತ ಚೂರ್ಣವನ್ನು ನವಯಾಸ ಚೂರ್ಣ ಯೋಗ ಎಂದು ಕರೆಯುತ್ತಾರೆ. ಈ ಚೂರ್ಣವನ್ನು ಸೇವಿಸಿದರೆ ಸೌಲ್ಯ (ಬೊಜ್ಜು) ಉಂಟಾಗುವುದಿಲ್ಲ, ಮಂದಾಗಿ ವೃದ್ಧಿಯಾಗುತ್ತದೆ, ಅರ್ಶರೋಗ, ಶೋಷ, ಪಾಂಡುರೋಗ, ಕುಷ್ಠ, ಅಜೀರ್ಣ, ಕಾಸ, ಶ್ವಾಸ (ಉಬ್ಬಸ), ಪ್ರಮೇಹಗಳು ಉಂಟಾಗುವುದಿಲ್ಲ.
ಅಧ್ಯಾಯ – 18
19. ಕ್ಷೀರಿಣಾಂ ಚ ತ್ವಚೊ ಯೋಜ್ಯಾ: ಕ್ವಾಥೇ ತ್ರಿಫಲಾಯಾ ಸಹ ।
ತೇನ ಕ್ವಾಥೇನ ನಿಯತಂ ಪ್ರಣಂ ಪ್ರಕ್ಷಾಳಯೇಷನ್ 1
*
ಆಲ, ಅತ್ತಿ ಮೊದಲಾದ ಕ್ಷೀರ ವೃಕ್ಷಗಳ ತೊಗಟೆ ಮತ್ತು ತ್ರಿಫಲ ಇವುಗಳ ಮಿಶ್ರಣದಿಂದ ತಯಾರಿಸಿದ ಕಷಾಯದಿಂದ ವ್ರಣಗಳನ್ನು ತೊಳೆದರೆ ಬೇಗ ವಾಸಿಯಾಗುತ್ತದೆ.
20 .ಮಾರ್ಕವಸ್ತ್ರಿ ಫಲಾದನ್ತಿ ತಾಮ್ರ ಚೂರ್ಣ ಮಯೋರ ಜಃ || ಉಪದಂಶಂ ನಿಹನ್ತ್ಯೇಷ ವೃಕ್ಷಮಿನ್ನಾ ಶನಿರ್ಯ ಥಾ |
ಗರುಗದ ಸೊಪ್ಪು, ತ್ರಿಫಲ, ಜಾಪಾಳದ ತೊಗಟೆ, ತಾಮ್ರದ ಪುಡಿ, ಕಬ್ಬಿಣದ ಪುಡಿ ವುಗಳ ಪ್ರಯೋಗದಿಂದ ಸಿಡಿಲು ಬಡಿದ ಮರದಂತೆ ಉಪದಂಶ ನಿವಾರಣೆಯಾಗುತ್ತದೆ.
ಅಧ್ಯಾಯ – 22
ದನ್ನಮೂಲಗತಾನಾಂ ತು ರೋಗಾಣಾಂ ಕರ್ಮ ನಕ್ಷತೇ , ll ಶೀತಾದೇ ಹೃತರಕ್ಕೆ ತು ತೋಯೇ ನಾಗರಸರ್ಪಷರ್ಾ |
ನಿಃ ಕ್ವಾಥ ತ್ರಿಫಲಾ ಮುಸ್ತಂ ಗುಂಡೂಷಃ ಸರಸಾಞನಃ ||
ಪ್ರಿಯಜ್ಞವಶ್ಚ ಮುಸ್ತಂ ಚ ತ್ರಿಫಲಾ ಚ ಪ್ರಲೇಪನಮ್ |
*ನಸ್ಕಂ ಚ ತ್ರಿಫಲಾಸಿದ್ದಂ tಮಧುಕೋತ್ಸಲ ಪದ್ಮ ಕೈ: ||
ದಂತ ಮೂಲಗತ ರೋಗಗಳಿಗೆ – ನೀರಿನಲ್ಲಿ ಶುಂಠಿ ಮತ್ತು ಸಾಸಿವೆಗಳನ್ನು ಕುದಿಸಿ,ತಿಫಲ, ಕೊನ್ನಾರಿ ಗೆಡ್ಡೆಗಳ ಕಷಾಯಕ್ಕೆ ರಸಾಂಜನ ಮಿಶ್ರ ಮಾಡಿ ಬಾಯಿ ಮುಕ್ಕಳಿಸಿ, ಪ್ರೇಖಣ (ಪ್ರಿಯಂಗು), ಕೊನ್ನಾರಿಗೆಡ್ಡೆ, ತ್ರಿಪಲಗಳ ಲೇಪನವನ್ನೂ, ತ್ರಿಫಲ ಕಷಾಯಕ್ಕೆ ಆತಿಮಧುರ, ನೈದಿಲೆ, ಪದ್ಮಕ ಚೂರ್ಣವನ್ನು ಸೇರಿಸಿ ನಸ್ಯ ಕರ್ಮವನ್ನು ಮಾಡಿಸಬೇಕು.
ಅಧ್ಯಾಯ – 25
22. ನೀಲಿದಳಂ ಭ್ರರಜೋರ್ಜುನತ್ತಕ್ ಪಿಗ್ನತಕಂ ಕೃಷ್ಣಮಯೋರಜಶ್ಚ । *ಬೀಜೋದ್ಭವಂ ಸಾಹಚ ರಂಜಪುಷಂ ಪಥ್ಯಾಕ್ಷಿಧಾತ್ರಿ ಸಹಿತಂ ವಿಚೂರ್ಣ್ಯ
*ಏಕೀಕೃತಂ ಸರ್ವಮಿರಂ ಪ್ರಮಾಯ ಪಜನ್ ತುಲ್ಬಂ ನಳಿನಿಭವೇನ |
ಸಂಯೋಜ್ಯ ಪಕ್ಷಂ ಕಲಶೇ ನಿದಾಯ ಲೋಹೇ ಘಟೇ ಸದ್ಧನಿ ಸಾಪಿದಾನೆ||
ಆನೇನ ತೈಲಂ ವಿಪಚೇದ್ದಿಮಿಶ್ರಂ ರಸೇನ ಭ್ರಙ್ಗ ತ್ರಿಫಲಾ ಭವೇನ* |
*ಅಸನ್ನ ಪಾಕೇ ಚ ಪರೀಕ್ಷಣಾರ್ಥಂ ಪತ್ರಂ ಬಲಾಕಾಭವಮಾಕ್ಷಿ ಪೇ ಚ್ಚ 11
ಭವೇದ್ಯದಾ ತದ್ಧಮರಾಜನೀಲಂ ತದಾ ವಿಪಕ್ವಂ ವಿನಿದಾಯ ಪಾತೇ । ಕೃಷ್ಣಾಯಸೇ ಮಾಸಮವಸ್ಥಿತಂ ತದಭಙ್ಗ ಯೋಗಾತ್ ಫಲಿತಾನಿ ಹನ್ಯಾತ್*
ನೀಲಿಗಿಡದ ಎಲೆ, ಗರುಗದ ಸೊಪ್ಪು, ಮತ್ತಿಮರದ ತೊಗಟೆ, ಕರಿ ಹೂವಿನ ಮಗ್ದಾರೆ ತೊಗಟೆ, ಕಪ್ಪು ಕಬ್ಬಿಣದ ಪುಡಿ, ಮಾದಳದ ಹೂ, ಮುಳ್ಳು ಗೋರಂಟಿಯ ಹೂ, ಅಳಲೆಕಾಯಿ, ತಾರೆಕಾಯಿ, ಬೆಟ್ಟದ ನೆಲ್ಲಿಕಾಯಿಯ ಸಿಪ್ಪೆ (ತ್ರಿಫಲ), ಇವುಗಳೆಲ್ಲವನ್ನು ಕುಟ್ಟಿ ಪುಡಿ ಮಾಡಿದ ಚೂರ್ಣಕ್ಕೆ ಸಮಭಾಗ ತಾವರೆ ಗಿಡದ ಕೆಳಗಿರುವ ಜೇಡಿಮಣ್ಣನ್ನು ಸೇರಿಸಿ ದೊಡ್ಡದಾದ ಕಬ್ಬಿಣದ ಪಾತ್ರೆಗೆ ತುಂಬಿ ಮುಚ್ಚಳ ಮುಚ್ಚಬೇಕು. ಒಂದು ಪಕ್ಷದ ನಂತರ ಹೊರಗೆ ತೆಗೆದು ಗರುಗದ ಸೊಪ್ಪು, ತ್ರಿಫಲದ ಕಷಾಯ ತೈಲ (ತಿಲತೈಲ) ಸೇರಿಸಿ ಪಾಕ ಮಾಡುತ್ತಿರುವಾಗ ಪರೀಕ್ಷೆಗಾಗಿ ಬಕಪಕ್ಷಿಯ ರೆಕ್ಕೆಗಳನ್ನು ಹಾಕಿ, ಅದು ದುಂಬಿಯ ಗರಿಯಂತೆ ನೀಲಿವರ್ಣಕ್ಕೆ ತಿರುಗಿದಾಗ ಪಾಕ ಸರಿಯಾಗಿದೆಯೆಂದು ತಿಳಿದು ಪಾತ್ರೆಯನ್ನು ಕೆಳಕ್ಕೆ ಇಳಿಸಿಕೊಂಡು ವಸ್ತ್ರದಿಂದ ತೈಲವನ್ನು ಸೋಸಿ ಕಬ್ಬಿಣದ ಪಾತ್ರೆಗೆ ತುಂಬಿ ಒಂದು ಮಾಸದವರೆಗೆ ಮುಚ್ಚಿಡಬೇಕು. ನಂತರ ಈ ತೈಲದಿಂದ ಅಭ್ಯಂಗ ಮಾಡಿದರೆ ನೆರೆತು ಬೆಳ್ಳಗಿರುವ ಕೂದಲು ಕಪ್ಪಾಗುತ್ತವೆ.