ಮನೆ ರಾಜ್ಯ ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ: ಎಎನ್ ಎಫ್‌ ನಿಂದ ಕೂಂಬಿಂಗ್ ಆಪರೇಷನ್

ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ: ಎಎನ್ ಎಫ್‌ ನಿಂದ ಕೂಂಬಿಂಗ್ ಆಪರೇಷನ್

0

ಕಾರ್ಕಳ: ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ನಡೆಯುತ್ತಿದೆ ಎಂಬ ನಿಟ್ಟಿನಲ್ಲಿ ಶಂಕೆ ವ್ಯಕ್ತವಾಗಿದೆ.‌

Join Our Whatsapp Group

ಈ ಹಿನ್ನೆಲೆಯಲ್ಲಿ, ಎಎನ್‌ಎಫ್ (ಆ್ಯಂಟಿ ನಕ್ಸಲೈಟ್ ಫೋರ್ಸ್) ತಂಡವು ಪಶ್ಚಿಮಘಟ್ಟ‌ಅರಣ್ಯ‌ ಭಾಗ ಈದು ಗ್ರಾಮ ಮುಸ್ಲೀಂ ಕಾಲೋನಿ ಬಂಡೆಕಲ್ಲು ಸುತ್ತಮುತ್ತ ಬೃಹತ್ ಕೂಂಬಿಂಗ್ ಆಪರೇಷನ್ ನಡೆಸುತ್ತಿದೆ.

ಗ್ರಾಮಸ್ಥರಲ್ಲಿ ಹಬ್ಬಿದ ಮಾಹಿತಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಚರ್ಚೆಗಳಾಗುತ್ತಿದೆ.‌ ಎಎನ್ ಎಫ್ ತನಿಖೆಯಲ್ಲಿ ಸ್ಥಳೀಯರಲ್ಲಿ ವಿಚಾರಿಸಿದಾಗ ಈ ಬಗ್ಗೆ ಯಾವುದೇ ಸುಳಿವು, ಕುರುವು ಇನ್ನೂ ಕಂಡುಬಂದಿಲ್ಲ. ಆದರೆ ಎಎನ್ ಎಫ್ ತಂಡದಿಂದ ಕೂಂಬಿಂಗ್ ಕಾರ್ಯಾಚರಣೆ‌ ಬಿಗುಗೊಂಡಿದೆ.

ನಕ್ಸಲರು ಕರಾವಳಿ ಪಶ್ಚಿಮಘಟ್ಟ ನುಸುಳಿದಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ ಎಎನ್‌ಎಫ್ ತಂಡವು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದು, ಗುರುವಾರ ‌ಮುಂಜಾನೆಯಿಂದಲೇ ಕೋಂಬಿಂಗ್ ನಲ್ಲಿ ತೊಡಗಿಸಿಕೊಂಡಿದೆ.