ಮನೆ ಕಾನೂನು ಕರ್ತವ್ಯದ ವೇಳೆ ನಿದ್ರಿಸುತ್ತಿದ್ದ ಇಬ್ಬರು  ಕಾನ್ಸ್ ಟೇಬಲ್ ಗಳ ಅಮಾನತು

ಕರ್ತವ್ಯದ ವೇಳೆ ನಿದ್ರಿಸುತ್ತಿದ್ದ ಇಬ್ಬರು  ಕಾನ್ಸ್ ಟೇಬಲ್ ಗಳ ಅಮಾನತು

0

ಬೆಂಗಳೂರು: ಕರ್ತವ್ಯದ ವೇಳೆ ನಿದ್ರಿಸುತ್ತಿದ್ದ ಇಬ್ಬರು ಕಾನ್ಸ್​ಟೇಬಲ್​ಗಳ ಅಮಾನತುಗೊಳಿಸಿ ವೈಟ್​​ ಫೀಲ್ಡ್​ ಡಿಸಿಪಿ ಎಸ್​.ಗಿರೀಶ್ ಆದೇಶ ಹೊರಡಿಸಿದ್ದಾರೆ.

Join Our Whatsapp Group

ಮಹದೇವಪುರ ಪೊಲೀಸ್ ಠಾಣೆ ಕಾನ್ಸ್​ ಟೇಬಲ್ ಈರಪ್ಪ ಉಂಡು, ಹೆಡ್​ ಕಾನ್ಸ್ ​ಟೇಬಲ್​ ಎ.ಎನ್.ಜಯರಾಮ್ ಅಮಾನತುಗೊಂಡವರು.

ಕಾನ್ಸ್ ​ಟೇಬಲ್ ಈರಪ್ಪ ಉಂಡು, ಹೆಡ್​ ಕಾನ್ಸ್​ಟೇಬಲ್​ ಎ.ಎನ್.ಜಯರಾಮ್ ರಾತ್ರಿ ಪಾಳಿಯಲ್ಲಿದ್ದರು. ಕರ್ತವ್ಯದ ವೇಳೆ ನಿದ್ದೆ ಮಾಡಿದ್ದಾರೆ. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ ಡಿಸಿಪಿ ಠಾಣೆಗೆ ಭೇಟಿ ನೀಡಿದ್ದಾರೆ. ಆಗ ಇಬ್ಬರು ಪೇದೆಗಳು ನಿದ್ರಿಸುತ್ತಿರುವುದನ್ನು ಕಂಡು ವೈಟ್​​​ ಫೀಲ್ಡ್​​​ ಡಿಸಿಪಿಗೆ ವರದಿ ನೀಡಿದ್ದಾರೆ. ನಗರ ಸಶಸ್ತ್ರ ಪಡೆ ಡಿಸಿಪಿ ವರದಿ ಆಧರಿಸಿ ಕಾನ್ಸ್​ ಟೇಬಲ್ ​ಗಳನ್ನು ಅಮಾನತುಮಾಡಿದ್ದಾರೆ.