ಮನೆ ಅಪರಾಧ ಹೆಚ್. ಎಂ ಪಟ್ಟಣದ ರಾಮೇಗೌಡರ ಮಗ ಗೋಪಾಲರ ಅನುಮಾನಾಸ್ಪದ ಸಾವು

ಹೆಚ್. ಎಂ ಪಟ್ಟಣದ ರಾಮೇಗೌಡರ ಮಗ ಗೋಪಾಲರ ಅನುಮಾನಾಸ್ಪದ ಸಾವು

0

ಸರ್ಕಾರಿ ಕಛೇರಿಗಳಲ್ಲಿ ಮರಣ ವ್ಯಕ್ತಿಯ ದಾಖಲೆ ನಾಪತ್ತೆ: ಅಕ್ರಮದಲ್ಲಿ ಪಿರಿಯಾಪಟ್ಟಣದ ಅಧಿಕಾರಿಗಳು ಭಾಗಿಯಗಿರುವ ಶಂಕೆ

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಹರವೇ ಮಲ್ಲರಾಜ ಪಟ್ಣಣದ ನಿವಾಸಿ ರಾಮೇಗೌಡರ ಮಗ ಗೋಪಾಲ ಎಂಬುವವರು ಏಳು ವರ್ಷಗಳು ಹಿಂದೆ, ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕುರಿತು ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿದೆ.

Join Our Whatsapp Group

ಈ ಸಂಬಂಧ ‘ಸವಾಲ್ ವಾಹಿನಿ’ಯ ತಂಡ ಗೋಪಾಲ್ ರವರ ಕುಟುಂಬದವರ ವಿಚಾರಿಸಿದರೆ ಯಾರೂ ಸಹ ಸಮರ್ಪಕ ಉತ್ತರವನ್ನು ನೀಡುವುದಿಲ್ಲ. ತಂದೆ ಯಾವ ವರ್ಷ, ಯಾವ ತಿಂಗಳಿನಲ್ಲಿ ಯಾವ ದಿನಾಂಕದಂದು ಸತ್ತಿದ್ದಾರೆ ಎಂದು ಕೇಳಿದರೆ ತನಗೆ ಸರಿಯಾಗಿ ನೆನಪಿಲ್ಲ ಇಲ್ಲ ಎಂಬ ಅನುಮಾನಾಸ್ಪದ ಉತ್ತರವನ್ನು ಮಕ್ಕಳು ನೀಡುತ್ತಿರುವ ಶಂಕೆಗೆ ಕಾರಣವಾಗಿದೆ.

ಸ್ವಂತ ತಂದೆಯ ಸಾವಿನ ಬಗ್ಗೆ ಮಗನಿಗೆ,  ಮನೆಯವರಿಗೆ ಗೊತ್ತಿಲ್ಲವೆಂದರೆ ನಂಬಲಸಾಧ್ಯವಾದ ವಿಷಯವಾಗಿದೆ.

ತನ್ನ ತಂದೆ ಸತ್ತಿರುವ ಬಗ್ಗೆ ಕಾನೂನಿನಂತೆ ಸಂಬಂಧಪಟ್ಟ ಇಲಾಖೆಗಳಲ್ಲಿ ನೋಂದಣಿ ಮಾಡಿಸದೇ ಇರುವುದು ಸಹ ಹಲವರು ಉಹಾಪೂಹಗಳಿಗೆ ಎಡೆ ಮಾಡಿಕೊಟ್ಟಿದೆ.

ಏನಿದು ಪ್ರಕರಣ ?

ಪಿರಿಯಾಪಟ್ಟಣ ತಾಲೂಕಿನ ಹರವೇ ಮಲ್ಲರಾಜ ಪಟ್ಣಣದ ನಿವಾಸಿ ರಾಮೇಗೌಡರ ಮಗ ಗೋಪಾಲ ಎಂಬುವವರ ಮರಣದ ನೋಂದಣಿ ಸಂಬಂಧಪಟ್ಟ ಯಾವುದೇ ಇಲಾಖೆಯಲ್ಲೂ ಆಗಿಲ್ಲ. ಸರ್ವೇ ನಂ 111ರಲ್ಲಿ 1.228 ಎಕರೆ ಜಮೀನನ್ನು ಹರವೇ ಮಲ್ಲರಾಜ ಪಟ್ಣಣದ ನಿವಾಸಿ ರಾಮೇಗೌಡರ ಮಗ ಗೋಪಾಲ ಹೊಂದಿರುತ್ತಾರೆ. ಸದರಿ ಆಸ್ತಿಯ ವಿಚಾರದಲ್ಲಿ ಗೋಪಾಲರವರ ಸಾವು ನಡೆದಿರುವ ಬಗ್ಗೆ ಗಾಳಿ ಮಾತು ಕೇಳಿ ಬರುತ್ತಿದೆ.

ಹೆಚ್. ಎಂ ಪಟ್ಟಣಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಯಲ್ಲಾಗಲಿ, ತಾಲೂಕು ಕಛೇರಿ ಇಲ್ಲವೇ ತಹಶೀಲ್ದಾರರ ಕಛೇರಿಯ ಯಾವುದೇ ವಿಭಾಗದಲ್ಲಿ ರಾಮೇಗೌಡರ ಮಗ ಗೋಪಾಲ ಮರಣ ಹೊಂದಿರುವ ಬಗ್ಗೆ ದಾಖಲೆಗಳಿಲ್ಲ. ಒಬ್ಬ ವ್ಯಕ್ತಿ ಮರಣ ಹೊಂದಿ ಹಲವಾರು ವರ್ಷಗಳಾಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಸದರಿ ವ್ಯಕ್ತಿಯ ಮರಣವನ್ನು ನೋಂದಣಿ ಮಾಡದಿರುವುದು  ಅನುಮಾನ  ಮೂಡಿಸಿದೆ.

ಯಾವುದೇ ವ್ಯಕ್ತಿ ಮರಣ ಹೊಂದಿರುವ ದಾಖಲಾತಿಗಳು ಜನನ ಮರಣ ಶಾಖೆ ಅಥವಾ ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಣಿ ಆಗಿರಬೇಕು. ಗೋಪಾಲ್ ರವರ ಮರಣದ ದಾಖಲಾತಿಗಳು ಸರ್ಕಾರಿ ಕಚೇರಿಯಲ್ಲಿ ಇಲ್ಲದಿರುವುದು ನೋಡಿದರೆ ಸಂಬಂಧಪಟ್ಟ ಅಲ್ಲಿನ ಅಧಿಕಾರಿಗಳ ಶಾಮೀಲಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ಆದ್ದರಿಂದ ಗೋಪಾಲ್ ಅವರ ಸಾವಿನ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ತನಿಖೆ ನಡೆಸಿ ಗೋಪಾಲ್ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಅಂತೆಯೇ  ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.