ಮೈಸೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೈಸೂರು, ಪಚೋಸ್ ಶೂಲೆ ಡಾರ್ಟ್ಮೆಂಡ್ ಜರ್ಮನಿ, ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ ಅಂಡ್ ಆರ್ಟ್ಸ್ ಡಾರ್ಟ್ಮೆಂಟ್, ಜರ್ಮನಿ ಹಾಗೂ ಇಂಜಿನಿಯರ್ ಸಹಯೋಗದಲ್ಲಿ ಆಯೋಜಿಸಲಾಗಿರುವ ಇಂಟರ್ ನ್ಯಾಷನಲ್ ಕಾನ್ ಕ್ಲೇವ್ ಆನ್ ಸಸ್ಟೈನಬಲ್ ಟೆಕ್ನಾಲಜೀಸ್ (ICST 2025) ಅಂತರರಾಷ್ಟ್ರೀಯ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್.ಈ. ಸುಧೀಂದ್ರ ಅವರು ಉದ್ಘಾಟನೆ ಮಾಡಿ, ಸಮ್ಮೇಳನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯವು ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು ರಾಷ್ಟ್ರಕ್ಕೆ ಜೈವಿಕ ಇಂಧನ ನೀತಿ – 2009 ರೂಪಿಸಿ ಅನುಷ್ಠಾನಗೊಳಿಸಿದ ಮೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕುರಿತು ಹಾಗೂ ಅನುಷ್ಠಾನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಿರುವುದನ್ನು ಸಮ್ಮೇಳನದಲ್ಲಿ ಪ್ರಸ್ತಾಪಿಸಿದರು. ರಾಜ್ಯದ ಮುಖ್ಯಮಂತ್ರಿ ಗಳ ಆಶಯದ ಭಾಗವಾಗಿ ಸುಸ್ಥಿರತೆಯು ಸಮಾಜದ ಎಲ್ಲ ಹಂತದಲ್ಲಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಮುಂದಿನ ಕೆಲವೇ ತಿಂಗಳಗಳಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು ಮಂಡಳಿ ಪೂರಕ ವಾತಾವರಣ ಸೃಜನಕ್ಕೆ ನಿರಂತರವಾಗಿ ಶ್ರಮಿಸುತ್ತಿರುವುದನ್ನು ಹಾಗೂ ಉನ್ನತ ತಂತ್ರಜ್ಞಾನ, ಬಳಕೆಗೆ ಒತ್ತು ನೀಡಿ ಕಾರ್ಯಕರ್ತರಾಗಿರುವುದನ್ನು ವಿವರಿಸಿದರು. ಜೈವಿಕ ಇಂಧನ ಕ್ಷೇತ್ರದ ಸುಸ್ಥಿರ ಬೆಳವಣಿಗೆಯು ಅಗಾಧವಾದ ವಿಸ್ತಾರವನ್ನು ಹೊಂದಿದ್ದು ಬಯೋ ಬ್ರಿಕೇಟ್ಸ್ , ಪೆಲೆಟ್ಟ್ಸ್ , ಬಯೋ ಡೀಸಲ್, 2 ಜಿ ಎಥನಾಲ್, ಕಂಪ್ರೆಸ್ಡ್ ಬಯೋಗ್ಯಾಸ್, ಗ್ರೀನ್ ಹೈಡ್ರೋಜನ್ ಮುಂತಾದ ಜೈವಿಕ ಇಂಧನ ಕ್ಷೇತ್ರದ ವಿಭಾಗಗಳಲ್ಲಿ ಒಂದು ಲಕ್ಷ ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶಗಳಿರುವ ಕುರಿತು ಅಂಕಿ ಅಂಶಗಳ ಸಮೇತ ಸಮ್ಮೇಳನದಲ್ಲಿ ವಿಶ್ಲೇಷಿಸಿದರು.
ಇತ್ತೀಚಿಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕ – ಜಾಗತಿಕ ಹೂಡಿಕೆದಾರರ ಶೃಂಗ ಸಭೆ -2025 ರಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಭಾಗವಹಿಸಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಲಭ್ಯವಿರುವ ಮುಕ್ತ ಅವಕಾಶಗಳನ್ನು ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಾಗಿರುವ ವಿಚಾರವನ್ನು ಉಲ್ಲೇಖಿಸಿ, ರಾಜ್ಯದಲ್ಲಿನ ಜೈವಿಕ ಇಂಧನ ಸಂಪನ್ಮೂಲ ಕ್ರೂಢೀಕರಣ, ಮೂಲ ಸೌಕರ್ಯಗಳು ಹಾಗೂ ಮಂಡಳಿ ಕೈಗೊಂಡಿರುವ ಸಂಯೋಜನ ಕಾರ್ಯಗಳ ಕುರಿತು ಪೂರ್ಣ ಪರಿಚಯ ಮಾಡಿಕೊಟ್ಟಿರುವುದನ್ನು ಪ್ರಸ್ತಾಪಿಸಿದರು.
ಈ ಶೃಂಗಸಭೆಯಲ್ಲಿ ಅಧ್ಯಕ್ಷರು ತಮ್ಮ ಅಧಿಕಾರಧ ಅವಧಿಯಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತಿಕರಣ ಹಾಗೂ ವಾಣಿಜ್ಯೀಕರಣಕ್ಕೆ ಪೂರಕ ವಾತಾವರಣದ ಸೃಜನೆಗೆ ತಾವು ಕೈಗೊಂಡಿರುವ ರಾಜ್ಯ ಹಾಗೂ ಹೊರದೇಶದ ಜೈವಿಕ ಇಂಧನ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ವಿಷಯ ಪರಿಣಿತರು, ಸಂಸ್ಥೆಗಳು, ಯೋಜನಾ ಉಸ್ತುವಾರಿ ಕಂಪನಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ, ಸಂಯೋಜನ ಕಾರ್ಯಗಳ ಕುರಿತು ತಿಳಿಸಿದರು.
ಮಂಡಳಿ ಜೈವಿಕ ಇಂಧನ ಕ್ಷೇತ್ರದ ಸುಸ್ಥಿರತೆಗೆ ಅನುಕೂಲವಾಗುವ ಬಂಡವಾಳ ಹೂಡಿಕೆಗೆ ಹೂಡಿಕೆದಾರರನ್ನು ಆಕರ್ಷಿಸಲು ನೂತನ” ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ’ ನಿರೂಪಿಸಲು ಈಗಾಗಲೇ ಕ್ರಮವಹಿಸಿರುವುದನ್ನು ,ಈ ವಾರದಲ್ಲಿಯೇ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವರು, ಜೈವಿಕ ಇಂಧನ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ತಂತ್ರಜ್ಞರು, ನೀತಿ ನಿರೂಪಕರು, ವಿಷಯ ಪರಿಣಿತರು, ಮಂಡಳಿಯ ಜೈವಿಕ ಇಂಧನ ಕಾರ್ಯ ಯೋಜನೆಗಳ ಭಾಗಿದಾರರೊಂದಿಗೆ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿರುವುದನ್ನು ಉಲ್ಲೇಖಿಸಿದರು.
ಈ ಅಂತರಾಷ್ಟ್ರೀಯ ಸಮ್ಮೇಳನವು ಅದರಲ್ಲೂ ಮುಖ್ಯವಾಗಿ ಜೈವಿಕ ಇಂಧನ ಕ್ಷೇತ್ರದ ಅಭೂತಪೂರ್ವ ಬೆಳವಣಿಗೆಗೆ ಸುಸ್ಥಿರ ತಾಂತ್ರಿಕತೆಯ ಪರಿಣಾಮಕಾರಿ ಕ್ರಮಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ.
ಈ ಅಂತರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಗಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ವ್ಯವಸ್ಥಾಪಕ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಮಂಡಳಿಯ ಭಾಗಿದಾರ ಸಂಸ್ಥೆಗಳ ಸಂಯೋಜಕರುಗಳು, ಮುಖ್ಯಸ್ಥರುಗಳು, ವಿದ್ಯಾರ್ಥಿಗಳು, ಅದರಲ್ಲೂ ಡಾ. ಶಾಮ್ ಸುಂದರ್ ಮತ್ತು ತಂಡದವರು ವಿಶೇಷವಾಗಿ ಶ್ರಮವಹಿಸಿರುವುದರ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಹಾಗೆಯೇ ಈ ಸಮ್ಮೇಳನದ ಆಯೋಜನೆ, ವಿಷಯಗಳ ಮಂಡನೆ, ಭವಿಷ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆಯಲ್ಲಿನ ಪರಿಣಾಮಗಳ ಕುರಿತು ಮಾಹಿತಿ ಬಿತ್ತರಿಸುತ್ತಿರುವ ಮುದ್ರಣ, ಎಲೆಕ್ಟ್ರಾನಿಕ್ಸ್ ಮೀಡಿಯಾ, ಸುದ್ದಿ ವಾಹಿನಿಗಳಿಗೆ ಧನ್ಯವಾದಗಳು ತಿಳಿಸಿದರು.
ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್ ಎಲ್. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಲೋಹಿತ್ ಬಿ ಆರ್, ಯೋಜನಾ ಸಲಹೆಗಾರರಾದ ಡಾ. ದಯಾನಂದ ಜಿ ಎನ್ ಹಾಗೂ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.