ಮೈಸೂರು(Mysuru): ಶತಮಾನ ಪೂರೈಸಿರುವ ದಿ ಸಿಟಿ ಕೋ-ಆಪರೇಟಿವ್ ಬ್ಯಾ೦ಕ್’ನ ನೂತನ ಅಧ್ಯಕ್ಷರಾಗಿ ಸ್ವರೂಪ್ ಎ೦.ಎನ್. ಹಾಗೂ ಉಪಾಧ್ಯಕ್ಷರಾಗಿ ಕುರುಬರಹಳ್ಳಿ ಜೆ.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ನಗರದ ಹರ್ಷ ರಸ್ತೆಯಲ್ಲಿರುವ ಬ್ಯಾಂಕ್’ನಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಪ್ರಭಾರ ವ್ಯವಸ್ಥಾಪಕ ಎಚ್.ರಾಜಶೇಖರ್ ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಸ್ವರೂಪ್, ನಮ್ಮ ಬ್ಯಾಂಕ್’ನಲ್ಲಿ 21,262 ಮಂದಿ ಸದಸ್ಯರಿದ್ದಾರೆ. ಅವರೆಲ್ಲರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನೀಡುವ ಗುರಿಯನ್ನು ಹೊಂದಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಈ ಬಾರಿ ಸಂಘದ ಯುವ ಸದಸ್ಯರಿಗೆ ಹೆಚ್ಚಿನ ನೆರವು ನೀಡಲು ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.ಅಂತೆಯೇ ಹೆಚ್ಚಿನ ಸದಸ್ಯರ ನೋಂದಣಿಗೂ ಕಾರ್ಯಕ್ರಮ ರೂಪಿಸಲಾಗುವುದು ಎಂದರು.