ನವದೆಹಲಿ(Newdelhi): ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ ಅಥವಾ ಮಾರಾಟ ಮಾಡಲಾಗುತ್ತಿಲ್ಲ ಎಂದು ಕೇಂದ್ರ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.
ಭಾರತದ 4 ಶೀತ ಹಾಗೂ ಕೆಮ್ಮಿನ ಸಿರಪ್’ಗಳು ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾಗಿವೆ ಹಾಗೂ ಉತ್ಪನ್ನಗಳನ್ನು ಬಳಸಿದವರಲ್ಲಿ ಮೂತ್ರಪಿಂಡದ ಗಾಯಗಳು ಕಂಡುಬಂದಿವೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ಬೆನ್ನಲ್ಲೇ ಈ ಕುರಿತು ತನಿಖೆಗೆ ಆದೇಶ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಸಂಬಂಧಿಸಿದ ಕೆಮ್ಮು ಸಿರಪ್ ಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಉತ್ಪನ್ನಗಳನ್ನು ರಫ್ತಿಗಾಗಿ ಮಾತ್ರ ತಯಾರಿಸಲಾಗುತ್ತಿದೆ. ಇವುಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿಲ್ಲ ಎಂದು ಹೇಳಿದೆ.
ಎಲ್ಲಾ ನಾಲ್ಕು ಔಷಧಿಗಳಿಗಾಗಿ ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಅದೇ ಬ್ಯಾಚ್’ನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಫಲಿತಾಂಶಗಳು ಮುಂದಿನ ಕ್ರಮಕ್ಕೆ ಮಾರ್ಗದರ್ಶನ ನೀಡುತ್ತವೆ ಮತ್ತು ಸ್ವೀಕರಿಸಿದ/ಸ್ವೀಕರಿಸಬೇಕಾದ ಒಳಹರಿವಿನ ಬಗ್ಗೆ ಸ್ಪಷ್ಟತೆಯನ್ನು ತರುತ್ತವೆ ಎಂದು ಸಚಿವಾಲಯ ಹೇಳಿದೆ.
ಅಂತೆಯೇ ವಿವಾದಿತ ಸಾವುಗಳ ಪ್ರಕರಣದಲ್ಲಿ ಸಿರಪ್ ನ ಪಾತ್ರದ ಕುರಿತು ಆರೋಪ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಕೋರಿ ವರದಿ ಹಂಚಿಕೊಳ್ಳುವಂತೆ ಮನವಿ ಮಾಡಿದೆ. ಯಾವುದೇ ಉತ್ಪನ್ನಗಳನ್ನು ಅವುಗಳ ಬಳಕೆಯನ್ನು ಅನುಮತಿಸುವ ಮೊದಲು ಸಾಮಾನ್ಯವಾಗಿ ದೇಶಗಳನ್ನು ಅವುಗಳನ್ನು ಪರೀಕ್ಷಿಸಿ ಬಳಿಕ ಆಮದು ಮಾಡಿಕೊಳ್ಳುತ್ತವೆ ಎಂದು ಸಚಿವಾಲಯ ಹೇಳಿದೆ. ಅಂತೆಯೇ ಮಕ್ಕಳ ಸಾವಿಗೆ ಕಾರಣ ಎಂಬ ಆರೋಪ ಎಲ್ಲಾ ಖಂಡಗಳಿಗೆ, ವಿಶೇಷವಾಗಿ ಆಫ್ರಿಕಾಕ್ಕೆ ಔಷಧಿಗಳನ್ನು ಪೂರೈಸುವ “ವಿಶ್ವದ ಔಷಧಾಲಯ” ಎಂಬ ಭಾರತದ ಇಮೇಜ್’ಗೆ ಹೊಡೆತವಾಗಲಿದೆ ಎಂದು ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.