ಕ್ರೈಸ್ಟ್‌ಚರ್ಚ್ (ಎಪಿ): ಮೊಹಮ್ಮದ್ ರಿಜ್ವಾನ್ (ಅಜೇಯ 78, 50 ಎಸೆತ) ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ಇಲ್ಲಿ ಆರಂಭವಾದ ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 21 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು.
ಪಾಕಿಸ್ತಾನ, ಬಾಂಗ್ಲಾ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳು ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಈ ಸರಣಿಯಲ್ಲಿ ಆಡುತ್ತಿವೆ.ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್, 20 ಓವರ್‌ಗಳಲ್ಲಿ 5 ವಿಕೆಟ್‌ಗೆ 167 ರನ್ ಗಳಿಸಿತು. ರಿಜ್ವಾನ್ ಅಲ್ಲದೆ ಬಾಬರ್ ಅಜಂ (22) ಮತ್ತು ಶಾನ್ ಮಸೂದ್ (31) ಉತ್ತಮ ಆಟವಾಡಿದರು.
ಬಾಂಗ್ಲಾ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 146 ರನ್ ಕಲೆಹಾಕಿತು. ಯಾಸಿರ್ ಅಲಿ (ಔಟಾಗದೆ 42) ಮತ್ತು ಲಿಟನ್ ದಾಸ್ (35 ರನ್) ಹೊರತುಪಡಿಸಿ ಇತರ ಬ್ಯಾಟರ್‌ಗಳು ವಿಫಲರಾದರು. ಪಾಕ್ ತಂಡದ ಮೊಹಮ್ಮದ್ ವಸೀಂ (24ಕ್ಕೆ 3) ಮತ್ತು ಮೊಹಮ್ಮದ್ ನವಾಜ್ (25ಕ್ಕೆ 2) ಶಿಸ್ತಿನ ಬೌಲಿಂಗ್ ನಡೆಸಿದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 167 (ಮೊಹಮ್ಮದ್ ರಿಜ್ವಾನ್ ಔಟಾಗದೆ 78, ಬಾಬರ್ ಅಜಂ 22, ಶಾನ್ ಮಸೂದ್ 31, ತಸ್ಕಿನ್ ಅಹ್ಮದ್ 25ಕ್ಕೆ 2, ಮೆಹ್ದಿ ಹಸನ್ 12ಕ್ಕೆ 1)ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 (ಶಬ್ಬಿರ್ ರಹಮಾನ್ 14, ಲಿಟನ್ ದಾಸ್ 35, ಅಫೀಫ್ ಹೊಸೇನ್ 25, ಯಾಸಿರ್ ಅಲಿ ಔಟಾಗದೆ 42, ಮೊಹಮ್ಮದ್ ವಸೀಂ 24ಕ್ಕೆ 3, ಮೊಹಮ್ಮದ್ ನವಾಜ್ 25ಕ್ಕೆ 2, ಶಾನವಾಜ್ ದಹಾನಿ 24ಕ್ಕೆ 1, ಹ್ಯಾರಿಸ್ ರವೂಫ್ 38ಕ್ಕೆ 1)