ಪ್ರಕಟಣೆ ಹೊರಡಿಸಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ
ಬೆಂಗಳೂರು: ಜೆಡಿಎಸ್ ಪಕ್ಷದ 20 ಮುಖಂಡರನ್ನು ಬೆಂಗಳೂರು ನಗರ ಜೆಡಿಎಸ್ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರು ಪ್ರಕಟಣೆ ಹೊರಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಕೆ.ಟಿ.ಶ್ರೀಕಂಠೇಗೌಡ, ಆರ್.ಪ್ರಕಾಶ್, ಗಂಗಾಧರ ಮೂರ್ತಿ, ಹೆಚ್.ಎನ್.ದೇವರಾಜು, ಶೀಲಾ ನಾಯಕ್, ಪ್ರಶಾಂತಿ ಗಾವಂಕರ್, ತಾರಾ ಲೋಕೇಶ್, ಶ್ವೇತಾ ಯಾದವ್, ಛಾಯಾ, ಜಿ. ಟಿ.ರೇವಣ್ಣ, ಪ್ರವೀಣ್ ಕುಮಾರ್ ಎ.ಎಂ., ಪ್ರದೀಪ್ ಕುಮಾರ್, ಎ.ನಾಗೇಂದ್ರ ಪ್ರಸಾದ್ ಬಾಬು, ಎಸ್.ಜಿ.ವೀರಣ್ಣ, ಪಿ.ವಿ.ಎಸ್.ಪ್ರಸಾದ್, ಎನ್. ಚಂದ್ರಶೇಖರ್, ಶೈಲಾ ರಾವ್, ನರಸಿಂಹ ಮೂರ್ತಿ, ಎಂ.ಗೋಪಾಲ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ಇವರೆಲ್ಲರೂ ಸುದ್ದಿ ಮಾಧ್ಯಮಗಳಲ್ಲಿ ಜೆಡಿಎಸ್ ಪಕ್ಷದ ವಿಚಾರ, ನಿಲುವುಗಳನ್ನು ಮಂಡಿಸಬೇಕಾಗಿ ಸೂಚಿಸಲಾಗಿದೆ ಎಂದು ಹೆಚ್.ಎಂ.ರಮೇಶ್ ಗೌಡ ಅವರು ತಿಳಿಸಿದ್ದಾರೆ.
Saval TV on YouTube