ಅಲಹಾಬಾದ್(Allahabad): ಆಗ್ರಾದ(Agra) ತಾಜ್ ಮಹಲ್‌ನಲ್ಲಿ(Taj Mahal) ಹಲವು ವರ್ಷಗಳಿಂದ ಮುಚ್ಚಿರುವ ಕೊಠಡಿಗಳ ಬಾಗಿಲು ತೆರೆಯುವಂತೆ ಆಗ್ರಹಿಸಿ ಅಲಹಾಬಾದ್ ಹೈಕೋರ್ಟ್(Allahabad Highcourt) ಗೆ ಬಿಜೆಪಿ ಮುಖಂಡ ಡಾ.ರಜನೀಶ್ ಸಿಂಗ್ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.
ಈ ಮಧ್ಯೆ ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ, ವಿಚಾರಣೆಯನ್ನ ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ.
ನಾಳೆಯೇ ತಾಜ್ ಮಹಲ್ ಕೊಠಡಿಗೆ ಹೋಗಲು ಅವಕಾಶ ಕೊಡಿ ಎಂದು ಅರ್ಜಿದಾರ ಮನವಿ ಮಾಡಿದ್ದು, ಈ ವೇಳೆ ಅರ್ಜಿದಾರನ ವಿರುದ್ಧ ನ್ಯಾಯಾಲಯ ಗರಂ ಆಗಿದೆ.
ನಾಳೆಯೇ ನ್ಯಾಯಾಧೀಶರ ಕೊಠಡಿಗೆ ಹೋಗಬೇಕೆಂದ್ರೆ ಹೇಗೆ…? ನಿಮಗೆ ತಾಜ್ ಇತಿಹಾಸ ಗೊತ್ತಾಗಬೇಕಾ ಅಥವಾ ಮುಚ್ಚಿದ ಕೋಣೆಯೆಲ್ಲಿ ಏನಿದೆ ಅಂತಾ ತಿಳಿಯಬೇಕಾ..? ಇತಿಹಾಸ ತಿಳಿಯಬೇಕಾದರೇ ಸಂಶೋಧನೆ,ಪಿಎಚ್ ಡಿ ಮಾಡಿ. ಸಾರ್ವಜನಿಕ ಹಿತಾಸಕ್ತಿ ಪದ್ಧತಿ ಅಪಹಾಸ್ಯ ಮಾಡಬೇಡಿ ಎಂದು ಕಿಡಿ ಕಾರಿತು. ನಂತರ ವಿಚಾರಣೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ ಮಾಡಿದೆ.