ನೈತಿಕ ಮತದಾನ ಮಾಡಿಸಲು ಮತ್ತು ಕಡಿಮೆ ಮತದಾನವಾಗುವ ಕಡೆಗಳಲ್ಲಿ ಹೆಚ್ಚು ಮತದಾನ ವಾಗುವಂತೆ ಮಾಡಲು ಕ್ರಮವಹಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಹೆಗ್ಗಡದೇವನಕೋಟೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆದ ಮತಗಟ್ಟೆ ಮಟ್ಟದ ಜಾಗೃತಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿ, ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ ಹಾಗೂ ಹೆಸರು ಇರುವುದರ ಬಗ್ಗೆ ಮಾಹಿತಿ ತಿಳಿಸಿ. ಮತದಾನ ಮಾಡಲು ಬರುವವರಿಗೆ ಕುಡಿಯುವ ನೀರು ಹಾಗೂ ನೆರಳು ಒದಗಿಸಲು ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
ಮತದಾರರಿಗೆ ಆಮಿಷ ಒಡ್ಡಿ ಹಣ, ಮಧ್ಯ ಹಾಗೂ ಇತರೆ ವಸ್ತುಗಳನ್ನು ಹಂಚುತ್ತಿರುವುದು ಕಂಡು ಬಂದಲ್ಲಿ, ತಕ್ಷಣ ಮಾಹಿತಿಯನ್ನು ಎಫ್ ಎಸ್ ಟಿ ತಂಡಕ್ಕೆ ತಿಳಿಸಬೇಕು. ಅನೈತಿಕ ಚುನಾವಣೆ ನಡೆಯದಂತೆ ತಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಸಭೆಯಲ್ಲಿ ಎಸ್ ಡಿ ಕೋಟೆ ಚುನಾವಣಾ ಅಧಿಕಾರಿಗಳಾದ ಕುಮುದಾ ಶರತ್ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.