ಮನೆ ಜ್ಯೋತಿಷ್ಯ ಉತ್ತಮ ಆಯಗಳನ್ನು ತೆಗೆಯುವುದು

ಉತ್ತಮ ಆಯಗಳನ್ನು ತೆಗೆಯುವುದು

0

       ಮೂರನೇ ವರ್ಗದ ಆಯಗಳು ಉತ್ತಮವಾಗಿ ಬರಬೇಕಾದರೆ ಉದ್ದ, ಅಗಲ ಮೊಳಗಳ ಸಂಖ್ಯೆಗಳೆರಡೂ ಬೆಸ ಸಂಖ್ಯೆಗಳಾಗಿರಬೇಕು. ಅಂದರೆ ಶುಭ ಆಯ ಬಂದೇ ಬರುತ್ತದೆ ಸರಿ ಸಂಖ್ಯೆಗಳಾದರೆ ಕೆಟ್ಟ ಆಯ  ಬರುತ್ತದೆ.ಒಂದು ಸರಿ, ಒಂದು ಬೆಸ ಸಂಖ್ಯೆಯಾದರೂ ಶುಭ ಆಯವು ಬರುವುದಿಲ್ಲ.

Join Our Whatsapp Group

ಆದ್ದರಿಂದ ಬೆಸ ಮೊಳಗಳ ಸಂಖ್ಯೆಯನ್ನೇ ಅಳೆದುಕೊಂಡು ಗಣಿತ ಆಯವು ಮಾಡಿದರೆ ಶುಭಾ ಆಯವು ಬರುತ್ತದೆ ಇದಲ್ಲದೇ, ಈ ರೀತಿ ಬೆಸ ಸಂಖ್ಯೆಯ ಅಳತೆಯಿಂದ ಧನ ಋಣ ಆಯುಷ್ಯಾದಿ ಉಳಿದ ಹತ್ತು ವರ್ಗಗಳೂ ವಿಶೇಷತಃ ಶುಭ ಫಲವನ್ನೇ ಉಂಟುಮಾಡುತ್ತವೆ.ಧನ ಋಣ ಆಯ ಆಯುಷ್ಯ ಇವುಗಳನ್ನುಳಿದು ಬಾಕಿ ಏಳು ವರ್ಗಗಳಲ್ಲಿ  ಶುಭ ವರ್ಗಗಳು ಹೆಚ್ಚಾಗಿದ್ದು. ಆಶುಭ ವರ್ಗಗಳು ಕೆಲವು ಇದ್ದರೂ ದೋಷ ವಾಗೂವುದಿಲ್ಲ ಹನ್ನೊಂದನೇ ವರ್ಗಗಳ ಗಣಿತದಲ್ಲಿ ಧನ,ಋಣ, ಆಯ, ಆಯುಷ್ಯ ಈ ನಾಲ್ಕೂ ವರ್ಗಗಳು ಮುಖ್ಯವಾಗಿ ಶುಭವಾಗಿದ್ದು ಇವುಗಳನ್ನು ಕೂಡಿಕೊಂಡು  ಉಳಿದ ಏಳು ವರ್ಗಗಳಲ್ಲಿ ಎರಡು ವರ್ಗಗಳಿಗಿಂತ ಹೆಚ್ಚಾಗಿ ಶುಭವರ್ಗಗಳಿರಬೇಕು ಅಂದರೆ ಹನ್ನೊಂದನೇ ವರ್ಗಗಳಲ್ಲಿ ಆರಕ್ಕಿಂತ ಹೆಚ್ಚು ವರ್ಗಗಳು ಶುಭಕರಗಳಾದಂತಾಯಿತು ಒಟ್ಟು ಆರು ಏಳು ಶುಭ ವರ್ಗಗಳಾದರೆ ಮಾಧ್ಯಮ ಶುಭ 8 9 ಶುಭ ವರ್ಗಗಳಾದರೆ ಉತ್ತಮ 10 11 ಶುಭ ವರ್ಗಗಳು ಹೊರಟರೆ ಸರ್ವತೋಮವೆಂದು ತಿಳಿಯಬೇಕು. ಇದೆ ಗ್ರಂಥ ಕರ್ತರಿಂದ ವಿರಚಿತವಾದ ನೂತನ ಗೃಹವಾಸ್ತು ದರ್ಪಣ ಎಂಬ ಗೃಹ ನಿರ್ಣಯ ದರ್ಪಣ ಎಂಬ ಗ್ರಂಥದ ಕೊನೆಯ ಭಾಗದಲ್ಲಿ ಒಂದು ಮೊಳ ಉದ್ದ,ಒಂದು ಮೊಳ ಅಗಲದಿಂದ 111 ಮೊಳ ಉದ್ದ 111 ಮೊಳ ಅಗಲದವರೆಗೆ ಶುಭ ವರ್ಗಗಳ ಆಯಾ ನಿರ್ಣಯ ಗಣಿತ ಮಾಡಿದ ಕೋಷ್ಟಕವನ್ನು ಕೊಟ್ಟಿರುತ್ತದೆ ತರಿಸಿ ನೋಡಿಕೊಳ್ಳಬೇಕು.

      ಒಟ್ಟಿನಲ್ಲಿ,ಆಯದ ವಿಚಾರದಲ್ಲಿ ಯಾವ ಆಯವನ್ನಿಟ್ಟು ಮನೆಯನ್ನು ಕಟ್ಟುವದಿದೆಯೋ ಆಯವು ಒಳ ಆಯಾವಾಗಿರಬೇಕು .

 ಶುಭ ಆಯಗಳು ಬರೆದಿದ್ದರೆ ಆಯವನ್ನು ಸರಿಪಡಿಸುವ ಕ್ರಮ :

      ಮನೆ ಕಟ್ಟುವ ಸ್ಥಳವು ಸಂದಿಗ್ಧವಾದಾಗ್ಗೆ ಅಂದರೆ, ಹೆಚ್ಚು ಕಡಿಮೆ ಇರದೇ ಸರಿ ಸಂಖ್ಯೆ ಮೊದಲಾದ ಅಳತೆಯ  ಲೆಕ್ಕದಂತೆ ಆಯವು ಉತ್ತಮ ಬಾರದೆ ಹೋದಾಗ್ಗೆ ಒಂದು ಮೂಲ ಹೆಚ್ಚು ಒಂದು ಮೊಳ ಕಡಿಮೆ ಮಾಡಲಿಕ್ಕೆ ಬಾರದಂತಹ ಜಾಗವಿದ್ದರೆ ಇಂತಹ ಪ್ರಸಂಗದಲ್ಲಿ ಸರಿಪಡಿಸಿಕೊಳ್ಳಬಹುದು.ಇದಕ್ಕೂ ಸರಿ ಹೋಗದ ಪಕ್ಷದಲ್ಲಿ ಅಂಗುಲಗಳ ಲೆಕ್ಕದಿಂದಾದರೂ ಸರಿಪಡಿಸಿಕೊಳ್ಳಬೇಕು. ಒಟ್ಟಿನಲ್ಲಿ ಮೊಳ ಹಾಗೂ ಪೂಟುಗಳ ಲೆಕ್ಕವು ಉತ್ತಮವು ಗೇಣು, ಅರ್ಥ ಪೂಟು ಲೆಕ್ಕವು ಮಾಧ್ಯಮವು.ಮುಷ್ಠಿ, ಕಾಲು ಪೂಟು, ಇಂಚು, ಅಂಗುಳ   ಬೆರಳುಗಳ ಲೆಕ್ಕವು ಅನಿವಾರ್ಯ ಒಟ್ಟಿನಲ್ಲಿ ಮೇಲೆ,ಯಾವದೇ ರೀತಿಯಿಂದ ಲೆಕ್ಕ ಮಾಡಿದರೂ ಉದ್ದ ಅಗಲಗಳು ಸಂಜಾತೀಯ ವಿರಬೇಕೆಂಬುದು ಮಾತ್ರ ಮರೆಯಬಾರದು.