Saval TV on YouTube
ಚೆನ್ನೈ: ಮಲೇಷ್ಯಾದಲ್ಲಿ ‘ಪಿಚ್ಚೈಕಾರನ್–2’ ಸಿನಿಮಾದ ಸಾಹಸ ದೃಶ್ಯದ ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ತಮಿಳು ನಟ ವಿಜಯ್ ಆ್ಯಂಟನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಜಯ್ ಆ್ಯಂಟನಿ ಅವರನ್ನು ಕ್ವಾಲಾಲಂಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಮಲೇಷ್ಯಾದ ದ್ವೀಪ ಸಮೂಹವೊಂದರ ಹಿನ್ನಿರಿನಲ್ಲಿ ಬೋಟ್’ಗಳ ಮೂಲಕ ಸಾಹಸ ದೃಶ್ಯದ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಚಿತ್ರದ ನಟ ನಿರ್ಮಾಪಕರೂ ಆಗಿರುವ ವಿಜಯ್ ಆ್ಯಂಟನಿ ಇನ್ನೊಂದು ಬೋಟ್’ಗೆ ಡಿಕ್ಕಿ ಹೊಡೆದು ಬೋಟಿನಲ್ಲಿ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಇತ್ತೀಚಿನ ವೈದ್ಯಕೀಯ ವರದಿ ಪ್ರಕಾರ ವಿಜಯ್ ಆ್ಯಂಟನಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರೂ ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.














