ಮನೆ ಮನೆ ಮದ್ದು ಹುಣಸೆ ಹಣ್ಣು (TAMRIND)

ಹುಣಸೆ ಹಣ್ಣು (TAMRIND)

0

ಭಾರತೀಯ ಅಡುಗೆಯಲ್ಲಿ ಧಾರಾಳವಾಗಿ ಬಳಕೆಯಾಗುವ ಈ ಪದಾರ್ಥ ತಿನ್ನಲು ರುಚಿಯಲ್ಲಿ ಬಹಳ ಹುಳಿಯಾಗಿರುತ್ತದೆ. ಈ ಕಾರಣದಲ್ಲಿ ಅಡಿಗೆಯಲ್ಲಿ ರುಚಿ ಹೆಚ್ಚಿಸಲು ಇದರ ಉಪಯೋಗ ಮಾಡಲಾಗುತ್ತದೆ. ಇದು ದೊಡ್ಡ ಮರಗಳಲ್ಲಿ 3-4 ಇಂಚು ಉದ್ದದ ಕಾಯಿಗಳಾಗಿ ಬೆಳೆಯುತ್ತದೆ. ಕಾಯಿಗಳು ಸ್ವಲ್ಪ ದಿನಗಳಲ್ಲಿ ಹಣ್ಣಾಗಿ ಕೆಂಪು ಬಣ್ಣಕ್ಕೆ ತಿರುಗಿದಾಗ, ಅದನ್ನ ಗಿಡದಿಂದ ಬೇರ್ಪಡಿಸುತ್ತಾರೆ. ಇದರ ಹಣ್ಣು ಮತ್ತು ಬೀಜಗಳು ಔಷಧಿಯಲ್ಲಿ ಬಳಕೆಯಾಗುತ್ತದೆ. ಪಕ್ವವಾದ ಹಣ್ಣು ಕಫ ಮತ್ತು ಕ್ರಿಮಿನಾಶಕವಾಗಿದೆ. ದೇಶದ ಎಲ್ಲ ಪ್ರದೇಶಗಳ ಜನರು ಇದನ್ನು ಸಾರು, ಚಟ್ನಿ ಮತ್ತು ಖಾದ್ಯ ಪದಾರ್ಥಗಳಲ್ಲಿ ಬಳಸುತ್ತಾರೆ.

ಔಷಧೀಯ ಗುಣಗಳು :-

* ಶ್ವೇತ ಕುಷ್ಠ – ಹುಣಸೆ ಬೀಜ ಮತ್ತು ಕರಿ ಜೀರಿಗೆ ನೀರಿನಲ್ಲಿ ಚೆನ್ನಾಗಿ ಅರಿದು, ಬಿಳಿಯ ಮಚ್ಚೆಗೆ ಲೇಪಿಸುವುದರಿಂದ ಶ್ವೇತ ಕುಷ್ಟರೋಗದಲ್ಲಿ ಪರಿಣಾಮಕಾರಿ ಲಾಭವಾಗುತ್ತದೆ.

* ಮೂಲವ್ಯಾಧಿ – ಹುಣಸೆಯ ಸಿಪ್ಪೆ ಪುಡಿಮಾಡಿ, ಮುಂಜಾನೆ ಸಂಜೆ ಆಕಳ ಮೊಸರಿನೊಂದಿಗೆ ಸೇವಿಸಬೇಕು. ಇದರ ಹೂಗಳನ್ನ ಅರೆದು ಅದರ ರಸ ವ್ಯಾಧಿಯ ಗುಡ್ಡೆಗೆ ಹಚ್ಚುವುದರಿಂದ ಮೂಲವ್ಯಾಧಿಯಲ್ಲಿ ಪರಿಣಾಮಕಾರಿ ಲಾಭವಾಗುತ್ತದೆ.

ಬೇಸಿಗೆಯಲ್ಲಿ ಇದರ ಶರಬತ್ ತಂಪು ಪಾನೀಯವಾಗಿದೆ. ಇದು ಶರೀರವನ್ನು ತಂಪಾಗಿಸುತ್ತದೆ. ಬೇಗ ಬಾಯಾರಿಕೆ ನಿವಾರಿಸುತ್ತದೆ. ಮಲೇರಿಯಾ ಜ್ವರದಲ್ಲಿ ಉಪಯೋಗಿಯಾಗಿದೆ.