ನಿಷೇಕಕ್ಕೆ ಗರ್ವಪಾತನಾಂಗ ಕರ್ಮಕ್ಕೆ ದಂಪತಿಗಳಿಗೆ ವಧೆ, ವಿಪತ್ತು ತಾರೆ ಇರಕೂಡದು. ಉಳಿದಿದ್ದೆಲ್ಲ ಪಂಚಾಂಗ ಶುಭವಿದ್ದರೆ ಸಾಕು.ಗರ್ಭದಾನಕ್ಕಾಗಿ ಅಶ್ವಿನಿ ರೋಹಿಣಿ,ಮೃಗಶಿರಾ, ಪುನರ್ವಸು, ಉತ್ತರಾ, ಹಸ್ತಾ, ಚಿತ್ತಾ, ಸ್ವಾತಿ, ಅನುರಾಧಾ, ಉತ್ತರಾಷಾಡ, ಶ್ರವಣ, ಧನಿಷ್ಠಾ ಶತಭಿಷಾ ಉತ್ತರಾ ಭಾದ್ರಪದಾ, ರೇವತಿ ಇವುಗ್ರಾಹ್ಯ ನಕ್ಷತ್ರಗಳು. ಪುರುಷ ನಕ್ಷತ್ರಗಳಾದ ಅಶ್ವಿನಿ, ರೋಹಿಣಿ,ಪುನರ್ವಸು, ಪುಷ್ಯ, ಹಸ್ತಾ, ಶ್ರಾವಣ ಅನುರಾಧಾ, ಉತ್ತರಾಭಾದ್ರಪದಗಳಲ್ಲಿ ಗರ್ಭದಾನ ನಿಷೇಕ,ಶ್ರೀಮಂತಾದಿಗಳ ಪುರುಷ ಸಂತಾನ ವೃದ್ಧಿಯಾಗುತ್ತದೆ.
ಸೀಮಂತ: ರೋಹಿಣಿ,ಮೃಗಶಿರಾ, ಪುನರ್ವಸು, ಪುಷ್ಪ, ಉತ್ತರಾ, ಹಸ್ತಾ, ಉತ್ತರಾಷಾಢಾ, ಶ್ರವಣ, ಉತ್ತರಭಾದ್ರಪದಾ, ರೇವತಿ ನಕ್ಷತ್ರಗಳು ಶ್ರೀಮಂತಕ್ಕೆ ಗ್ರಾಹ್ಯವಾದಂಥವು.ಚಿತ್ತಾ, ಅಶ್ವಿನಿ, ಸ್ವಾತಿ, ಧನಿಷ್ಠಾ, ಶತದಭಿಷಾ, ಅನುರಾಧ ಈ ನಕ್ಷತ್ರಗಳು ಅಗ್ರಾಹ್ಯವಾದಂಥವು.
*ಜಾತಕ ಕರ್ಮ ನಾಮಕರಣ: ಅಶ್ವಿನಿ, ರೋಹಿಣಿ,ಮೃಗಶಿರಾ, ಪುನರ್ವಸು, ಪುಷ್ಯ, ಹಸ್ತ, ಉತ್ತರಾ, ಚಿತ್ತ ಸ್ವಾತಿ ಅನುರಾಧಾ ಉತ್ತರಾಷಾಢಾ, ಶ್ರಾವಣ ಧನಿಷ್ಠಾ ಶತಭಿಷಾ, ಉತ್ತರಭಾದ್ರಪದಾ, ರೇವತಿ, ಇವು ನಾಮಕರಣಕ್ಕೆ ಗ್ರಾಹ್ಯಕವಾದಂಥಹ ನಕ್ಷತ್ರಗಳು.
ಶಿಶುವನ್ನು ತೊಟ್ಟಿಲಿಗೆ ಹಾಕುವುದು ರೋಹಿಣಿ, ಮೂಲ, ಉತ್ತರಾ, ಉತ್ತರಾಷಾಡಾ, ಉತ್ತರ ಭಾದ್ರಪದಾ, ಮತ್ತು ತಿರ್ಯಙ್ಮುಖ ನಕ್ಷತ್ರಗಳಾದ ರೇವತಿ,ಪುನರ್ವಸು, ಹಸ್ತ, ಚಿತ್ತಾ, ಸ್ವಾತಿ,ಅಶ್ವಿನಿ, ಮೃಗಶಿರಾ, ಅನುರಾಧ,ಈ ನಕ್ಷತ್ರಗಳು ಶಿಶುವನ್ನು ತೊಟ್ಟಿಲಿಗೆ ಹಾಕಿ ತೂಗಲು ಗ್ರಾಹ್ಯವಾದಂಥವು.
ಅನ್ನ ಮುಹೂರ್ತ : ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಣ,ಮಘಾ, ಉತ್ತರಾ, ಹಸ್ತಾ, ಚಿತ್ತಾ, ಸ್ವಾತಿ, ಅನುರಾಧಾ, ಉತ್ತರಾಷಾಢ,ಶ್ರಾವಣದನಿಷ್ಠಾ, ಶತಭಿಷಾ, ಉತ್ತರ ಭಾದ್ರಪದಾ, ರೇವತಿ ಈ ನಕ್ಷತ್ರಗಳು ಶಿಶುವಿನ ಅನ್ನ ಮುಹೂರ್ತಕ್ಕೆ ಗ್ರಾಹ್ಯಗಳು .
ನವೀನ ವಸ್ತಧಾರಣೆ : ಹಾಸ್ತ, ಉತ್ತರ, ಉತ್ತರಾಷಾಡ, ಉತ್ತರ ಭಾದ್ರಪದಾ, ಸ್ವಾತಿ, ಪುನರ್ವಸು, ಪುಷ್ಪ, ಅನುರಾಧಾ, ಚಿತ್ತಾ, ವಿಶಾಖಾ, ರೋಹಿಣಿ, ಶತಭಿಷಾ, ರೇವತಿ ನಕ್ಷತ್ರಗಳು ನವೀನ ವಸ್ತ ಪಡೆಯುವುದು ಮಧು ಮತ್ತು ಧಾರಣ ಮಾಡುವುದಕ್ಕೆ ಗ್ರಾಹ್ಯಗಳು.